ಕರ್ನಾಟಕ

karnataka

ETV Bharat / bharat

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,451 ಸೋಂಕಿತರು ಪತ್ತೆ: 585 ಮಂದಿ ಸಾವು - ದೇಶದಲ್ಲಿ 13451 ಹೊಸ ಕೋವಿಡ್​ ಪ್ರಕರಣಗಳು ದಾಖಲು,

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,451 ಸೋಂಕಿತರು ಪತ್ತೆಯಾಗಿದ್ದು, 585 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದ ಒಟ್ಟು ಕೇಸ್​ಗಳ ಸಂಖ್ಯೆ 3,42,15,653 ಹಾಗೂ ಮೃತರ ಸಂಖ್ಯೆ 4,55,653ಕ್ಕೆ ಏರಿಕೆಯಾಗಿದೆ.

India reports, India reports 13451 new COVID cases, India covid report, ಭಾರತದ ಕೋವಿಡ್​ ವರದಿ, ದೇಶದಲ್ಲಿ 13451 ಹೊಸ ಕೋವಿಡ್​ ಪ್ರಕರಣಗಳು ದಾಖಲು, ಭಾರತದ ಕೋವಿಡ್​ ಅಪ್​ಡೇಟ್​ ವರದಿ,
ಒಂದೇ ದಿನ 585 ಮಂದಿ ಕೋವಿಡ್​ಗೆ ಬಲಿ

By

Published : Oct 27, 2021, 9:57 AM IST

ನವದೆಹಲಿ:ಭಾರತದಲ್ಲಿ ಕಳೆದ 2 ತಿಂಗಳಿಂದ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಹಬ್ಬಗಳ ನಂತರದ ದಿನಗಳಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗ್ತಿದ್ದು, ಮೂರನೇ ಅಲೆಯ ಭೀತಿ ಶುರುವಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,451 ಸೋಂಕಿತರು ಪತ್ತೆಯಾಗಿದ್ದು, 585 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದ ಒಟ್ಟು ಕೇಸ್​ಗಳ ಸಂಖ್ಯೆ 3,42,15,653 ಹಾಗೂ ಮೃತರ ಸಂಖ್ಯೆ 4,55,653ಕ್ಕೆ ಏರಿಕೆಯಾಗಿದೆ. 14,021 ಜನ ಸೇರಿದಂತೆ ಒಟ್ಟು 3,35,97,339 ಮಂದಿ ಕೋವಿಡ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಮನೆ ಸೇರಿದ್ದಾರೆ.

ಸದ್ಯ 1,62,661 ಕೇಸ್​ಗಳು ಸಕ್ರಿಯವಾಗಿದ್ದು, 242 ದಿನಗಳಲ್ಲಿ ಇದು ಅತೀ ಕಡಿಮೆ ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

103.53 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಅಕ್ಟೋಬರ್​ 21ಕ್ಕೆ ನೂರು ಕೋಟಿ ಡೋಸ್​ ಲಸಿಕೆ ವಿತರಿಸಿ ಭಾರತ ಇತಿಹಾಸ ಬರೆದಿತ್ತು. ಇಲ್ಲಿಯವರೆಗೂ 103.53 ಕೋಟಿಗೂ ಅಧಿಕ ಡೋಸ್​ ವ್ಯಾಕ್ಸಿನ್​ ಅನ್ನು ಜನರು ಪಡೆದಿದ್ದಾರೆ. ಕಳೆದ 24 ಗಂಟೆಯಲ್ಲಿ 55,59,124 ಜನರು ಕೊರೊನಾ ಲಸಿಕೆ ಪಡೆದಿದ್ದಾರೆ.

ABOUT THE AUTHOR

...view details