ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೆ ಕೋವಿಡ್​ ಉಲ್ಬಣ.. 13 ಸಾವಿರ ಗಡಿ ದಾಟಿದ ಕೊರೊನಾ, ಸಾವಿನ ಸಂಖ್ಯೆ ಏರಿಕೆ! - ಭಾರತದ ಕೋವಿಡ್ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್​ ಪ್ರಕರಣದಲ್ಲಿ ಕೊಂಚ ಏರಿಕೆ ಕಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿದೆ.

India covid reports, India covid recoveries, India covid deaths, India corona news, ಭಾರತ ಕೋವಿಡ್ ವರದಿ, ಭಾರತ ಕೋವಿಡ್ ಗುಣಮುಖ, ಭಾರತದ ಕೋವಿಡ್ ಸಾವು, ಭಾರತ ಕೊರೊನಾ ಸುದ್ದಿ,
ಕೋವಿಡ್​

By

Published : Jun 18, 2022, 10:38 AM IST

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 13,216 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೂ ಮುಂಚಿನ 24 ಗಂಟೆಗಳಲ್ಲಿ ಪತ್ತೆಯಾಗಿದ್ದ 12,847 ಪ್ರಕರಣಗಳಿಗೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆ 400ಕ್ಕೂ ಹೆಚ್ಚು ಕಂಡು ಬಂದಿದೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್​ನಿಂದ 23 ಜನ ಮೃತಪಟ್ಟಿದ್ದು, ದೇಶದಲ್ಲಿ ಈವರೆಗೆ ಕೋವಿಡ್​ ನಿಂದ ಮೃತಪಟ್ಟವರ ಸಂಖ್ಯೆ 5,24,840 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 68,108 ಇದ್ದು, ಇದು ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಶೇ 0.16 ರಷ್ಟಿದೆ.

ಓದಿ:ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್: ಬೆಂಗಳೂರಿಗೊಂದು, ಮೈಸೂರಿಗೊಂದು ರೂಲ್ಸ್

ಕಳೆದ 24 ಗಂಟೆಗಳಲ್ಲಿ 8,148 ರೋಗಿಗಳು ಕೋವಿಡ್​ನಿಂದ ಚೇತರಿಸಿಕೊಂಡಿದ್ದು, ಇಲ್ಲಿಯವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 4,26,90,845 ಆಗಿದೆ. ದೇಶದಲ್ಲಿ ಕೋವಿಡ್​ನಿಂದ ಗುಣಮುಖರಾಗುವವರ ಪ್ರಮಾಣ ಶೇ 98.63 ರಷ್ಟಿದೆ. ಪ್ರತಿದಿನದ ಪಾಸಿಟಿವಿಟಿ ರೇಟ್ ತುಸು ಏರಿಕೆಯಾಗಿ ಶೇ 2.73 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 4,84,924 ಕೋವಿಡ್ ಟೆಸ್ಟ್​ಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ 85.73 ಕೋಟಿ ಕೋವಿಡ್ ಟೆಸ್ಟ್​ಗಳನ್ನು ಮಾಡಲಾಗಿದೆ. ಶುಕ್ರವಾರದ ಮುಂಜಾನೆ ವೇಳೆಗೆ ದೇಶದಲ್ಲಿ ಒಟ್ಟಾರೆ 196 ಕೋಟಿ ಕೋವಿಡ್ ಲಸಿಕಾ ಡೋಸ್​ಗಳನ್ನು ನೀಡಲಾಗಿದೆ.

ABOUT THE AUTHOR

...view details