ನವದೆಹಲಿ:ನಿಧಾನವಾಗಿ ದೇಶದಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗುತ್ತಿದ್ದು, ಮೂರನೇ ಅಲೆ ಸಮೀಪಿಸುವ ಮುನ್ನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಎಚ್ಚರಿಸುತ್ತಾ ಬರುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,32,364 ಸೋಂಕಿತರು ಪತ್ತೆಯಾಗಿದ್ದು, 2,713 ಮಂದಿ ಅಸುನೀಗಿದ್ದಾರೆ.
ಭಾರತದಲ್ಲಿ ಈವರೆಗೆ ಒಟ್ಟು 2,85,74,350 ಜನರು ವೈರಸ್ ಸುಳಿಯಲ್ಲಿ ಸಿಲುಕಿದ್ದು, 3,40,702 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 2,65,97,655 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುರುವಾರ ಒಂದೇ ದಿನದಲ್ಲಿ 2,07,071 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ: ಸರ್ಕಾರವನ್ನು ಎಚ್ಚರಿಸುವಂತೆ ಪ್ರತಿಪಕ್ಷಗಳಿಗೆ ಬುದ್ಧಿಜೀವಿಗಳ ಪತ್ರ