ನವದೆಹಲಿ :ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 11,903 ಹೊಸ ಕೋವಿಡ್-19 (COVID-19) ಪ್ರಕರಣ ದೃಢಪಟ್ಟಿವೆ. ನಿನ್ನೆಗೆ ಹೋಲಿಸಿದರೆ ಶೇ.14 ರಷ್ಟು ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ.
ಆದರೆ, ಹಿಂದಿನ 252 ದಿನಗಳಿಗೆ ಹೋಲಿಸಿದ್ರೆ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯ ಭಾರತದಲ್ಲಿ 1,51,209 ಸಕ್ರಿಯ ಪ್ರಕರಣಗಳಿವೆ. ಕಳೆದ 252 ದಿನಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ನಿನ್ನೆ 311 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 45,91,91ಕ್ಕೆ ಏರಿಕೆಯಾಗಿದೆ.
ದೇಶಾದ್ಯಂತ ನಿನ್ನೆ 14,159 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ.98.21ರಷ್ಟಿದೆ. ಜೊತೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 3,36,97,740ಕ್ಕೆ ಏರಿಕೆಯಾಗಿದೆ.
ದೇಶಾದ್ಯಂತ ಲಸಿಕಾ ನೀಡಿಕೆ ನಿರಂತರವಾಗಿ ನಡೆಯುತ್ತಿದೆ. ನಿನ್ನೆ 41,16,230 ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಈವರೆಗೆ ಒಟ್ಟು 1,07,29,66,315 ಡೋಸ್ ನೀಡಲಾಗಿದೆ.