ನವದೆಹಲಿ: ಇಂಗ್ಲೆಂಡ್ನಲ್ಲಿ ಹೊಸ ರೂಪ ಧರಿಸಿ ಇತರ ರಾಷ್ಟ್ರಗಳಿಗೆ ಹರಡುತ್ತಿರುವ ರೂಪಾಂತರಿ ಕೊರೊನಾ ಸೋಂಕು ಭಾರತದಲ್ಲಿ ಈವರೆಗೆ 153 ಜನರಿಗೆ ತಗುಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11,666 ಸೋಂಕಿತರು ಪತ್ತೆಯಾಗಿದ್ದು, 123 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,07,01,193 ಹಾಗೂ ಮೃತರ ಸಂಖ್ಯೆ 1,53,847ಕ್ಕೆ ಏರಿಕೆಯಾಗಿದೆ. ಆದರೆ, ಒಟ್ಟು ಸೋಂಕಿತರ ಪೈಕಿ 1,03,73,606 ಮಂದಿ ಗುಣಮುಖರಾಗಿದ್ದು, ಉಳಿದಂತೆ 1,73,740 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿನ ಶೇ.70ರಷ್ಟು ಆ್ಯಕ್ಟಿವ್ ಕೇಸ್ಗಳು ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ವರದಿಯಾಗಿದೆ. ಕಳೆದ 7 ದಿನಗಳಿಂದ 147 ಜಿಲ್ಲೆಗಳಲ್ಲಿ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಕಳೆದ 14 ದಿನಗಳಲ್ಲಿ 18 ಜಿಲ್ಲೆಗಳಲ್ಲಿ ಹಾಗೂ ಕಳೆದ 21 ದಿನಗಳಲ್ಲಿ ಆರು ಜಿಲ್ಲೆಗಳಲ್ಲಿ ಸೋಂಕಿತರು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್
ಜನವರಿ 28ರ ವರೆಗೆ 19,43,38,773 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,25,653 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ. ಇನ್ನು ಈವರೆಗೆ 23,55,979 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.