ಕರ್ನಾಟಕ

karnataka

ETV Bharat / bharat

India Covid Report: ಕೋವಿಡ್​ ಮೃತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ..ನಿನ್ನೆ ದೇಶದಲ್ಲಿ 488 ಮಂದಿ ಬಲಿ - ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,549 ಕೋವಿಡ್​ ಕೇಸ್​ಗಳು ಪತ್ತೆಯಾಗಿದೆ. ಆದರೆ, 488 ಮಂದಿ ​ಸೋಂಕಿತರು ಅಸು ನೀಗಿದ್ದಾರೆ. ಈ ಮೂಲಕ ದೇಶದಲ್ಲಿನ ಒಟ್ಟು ಕೋವಿಡ್​ ಕೇಸ್​ಗಳ ಸಂಖ್ಯೆ 3,45,55,431 ಹಾಗೂ ಮೃತರ ಸಂಖ್ಯೆ 4,67,468ಕ್ಕೆ ಏರಿಕೆಯಾಗಿದೆ.

India Covid Report
ಭಾರತದ ಕೋವಿಡ್​ ವರದಿ

By

Published : Nov 26, 2021, 1:38 PM IST

ನವದೆಹಲಿ: ಎರಡನೇ ಅಲೆಯಲ್ಲಿ ರೂಪಾಂತರ ಪಡೆದ ಕೊರೊನಾ ವೈರಸ್​ ತೀವ್ರತೆಯೋ ಅಥವಾ ವೈದ್ಯಕೀಯ ಸೌಲಭ್ಯಗಳ ಕೊರತೆಯೋ ಗೊತ್ತಿಲ್ಲ, ದೇಶದಲ್ಲಿ ಹೊಸ ಸೋಂಕಿತರ ಪ್ರಮಾಣ ತಗ್ಗಿದರೂ ಮೃತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,549 ಕೋವಿಡ್​ ಕೇಸ್​ಗಳು ಪತ್ತೆಯಾಗಿದೆ. ಆದರೆ 488 ಮಂದಿ ​ಸೋಂಕಿತರು ಅಸು ನೀಗಿದ್ದಾರೆ. ಈ ಮೂಲಕ ದೇಶದಲ್ಲಿನ ಒಟ್ಟು ಕೋವಿಡ್​ ಕೇಸ್​ಗಳ ಸಂಖ್ಯೆ 3,45,55,431 ಹಾಗೂ ಮೃತರ ಸಂಖ್ಯೆ 4,67,468ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನ ವಸತಿ ಶಾಲೆಯಲ್ಲೂ ಕೊರೊನಾ ಸ್ಫೋಟ: 33 ವಿದ್ಯಾರ್ಥಿಗಳಿಗೆ ಸೋಂಕು

ಇನ್ನು ಗುಣಮುಖರ ಪ್ರಮಾಣ ಶೇ.96.33ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,10,133ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದಾಖಲೆಯ 120 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ನಿನ್ನೆಯವರೆಗೆ ದಾಖಲೆ ಮಟ್ಟದಲ್ಲಿ 120 ಕೋಟಿಗೂ ಅಧಿಕ ಡೋಸ್​ ವ್ಯಾಕ್ಸಿನ್​ ಅನ್ನು ಜನರಿಗೆ ನೀಡಲಾಗಿದೆ.

ABOUT THE AUTHOR

...view details