ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ನಿಲ್ಲದ ಕೋವಿಡ್​ ಆರ್ಭಟ.. ದೇಶದಲ್ಲಿ 1.5 ವರ್ಷದ ಬಳಿಕ ಅತ್ಯಂತ ಕಡಿಮೆ ಪ್ರಕರಣ ದಾಖಲು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,197 ಕೋವಿಡ್​ ಸೋಂಕಿತರು (Covid cases) ಪತ್ತೆಯಾಗಿದ್ದು, 301 ಮಂದಿ ಸಾವನ್ನಪ್ಪಿರುವ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಹೇಳಿದೆ.

Today Corona cases, India Corona cases, India covid updated, India covid report, ಇಂದಿನ ಕೊರೊನಾ ಪ್ರಕರಣಗಳು, ಭಾರತದಲ್ಲಿನ ಕೊರೊನಾ ಪ್ರಕರಣಗಳು, ಭಾರತದಲ್ಲಿನ ಕೋವಿಡ್​ ಅಪ್​ಡೇಟ್​, ಭಾರತದ ಕೋವಿಡ್​ ವರದಿ,
ಕೇರಳದಲ್ಲಿ ನಿಲ್ಲದ ಕೋವಿಡ್​ ಆರ್ಭಟ

By

Published : Nov 17, 2021, 10:45 AM IST

ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 10,197 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 301 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳು ಕೋವಿಡ್​ ವರದಿ ಸೇರಿ ದೇಶದಲ್ಲಿ ಒಟ್ಟು ಕೊರೊನಾ ಕೇಸ್​ಗಳ ಸಂಖ್ಯೆ (Covid Cases) 3.45 ಕೋಟಿಗೆ ತಲುಪಿವೆ.

ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ (Covid Deaths) 4,64ಕ್ಕೆ ಹೆಚ್ಚಳವಾಗಿದೆ. ನಿನ್ನೆ ಒಂದೇ ದಿನ 12,134 ಸೋಂಕಿತರು ಕೋವಿಡ್​ನಿಂದ ಗುಣಮುಖರಾಗಿದ್ದಾರೆ. ಒಟ್ಟು ಶೇ 98.27 ರಷ್ಟು ಜನ ಕೊರೊನಾದಿಂದ ಮುಕ್ತರಾಗಿದ್ದಾರೆ. ಮಾರ್ಚ್ 2020 ರಿಂದ 3,38,73,890 ಮಂದಿ ಕೊರೊನಾದಿಂದ ಬಿಡುಗಡೆ ಹೊಂದಿದ್ದಾರೆ.

ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳು 1,28,555 ಕ್ಕೆ ಇಳಿದಿದ್ದು, ಇದು ಕಳೆದ 527 ದಿನಗಳಲ್ಲೇ ಅತ್ಯಂತ ಕಡಿಮೆ ಎಂದು ಆರೋಗ್ಯ ಇಲಾಖೆ ಅಂಕಿ - ಅಂಶಗಳು ಹೇಳಿವೆ. ಆರೋಗ್ಯ ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ಸಾಪ್ತಾಹಿಕ ಸಕಾರಾತ್ಮಕತೆ ದರವು (ಶೇ 0.96) ಇದ್ದು, ಕಳೆದ 54 ದಿನಗಳಿಂದ ಶೇಕಡಾ 2 ಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4,64,153 ಆಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ನವೆಂಬರ್ 16 ರವರೆಗೆ 62,70,16,336 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಮಂಗಳವಾರ ಒಂದೇ ದಿನ 12,42,177 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಏತನ್ಮಧ್ಯೆ, ಕೇರಳದಲ್ಲಿ ಮಂಗಳವಾರ 5,516 ಹೊಸ ಕೊರೊನಾ ವೈರಸ್ ಸೋಂಕುಗಳು ಮತ್ತು 210 ಸಾವುಗಳು ದಾಖಲಾಗಿವೆ.

ABOUT THE AUTHOR

...view details