ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಆ್ಯಂಟಿ-ವೈರಲ್ ಔಷಧವಾದ ರೆಮ್ಡೆಸಿವಿರ್ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ತೆಗೆದುಹಾಕಿದೆ.
ಹಣಕಾಸು ಸಚಿವಾಲಯವು ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ, ಔಷಧ ತಯಾರಿಸಲು ಬಳಸುವ ಔಷಧೀಯ ಪದಾರ್ಥಗಳ ಆಮದು ಮೇಲಿನ ಸುಂಕವನ್ನು ರದ್ದುಗೊಳಿಸಿದೆ.