ಕರ್ನಾಟಕ

karnataka

ETV Bharat / bharat

ಅರುಣಾಚಲದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ: ಆವಿಷ್ಕಾರದ ಹೆಸರಿನಿಂದ ವಾಸ್ತವತೆ ಬದಲಾಗಲ್ಲ ಎಂದ ಭಾರತ - ಚೀನಾದ ಕ್ರಮ ಖಂಡಿಸಿದ ಭಾರತ

ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಾವಣೆ ಮಾಡಿರುವ ಚೀನಾವು ಈ ಪ್ರದೇಶಗಳನ್ನು ದಕ್ಷಿಣ ಟಿಬೆಟ್ ಅಡಿಯಲ್ಲಿ ಗುರುತಿಸಿದೆ. ಚೀನಾದ ಈ ಕ್ರಮವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಖಂಡಿಸಿದೆ.

india-rejects-china-renaming-places-in-arunachal-pradesh
ಅರುಣಾಚಲದ 11 ಸ್ಥಳಗಳ ಹೆಸರು ಬದಲಾಯಿಸಿದ ಚೀನಾ: ಆವಿಷ್ಕಾರದ ಹೆಸರಿನಿಂದ ವಾಸ್ತವತೆ ಬದಲಾಗಲ್ಲ ಎಂದ ಭಾರತ

By

Published : Apr 4, 2023, 12:40 PM IST

ತೇಜ್‌ಪುರ: ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಸಾಧಿಸುವ ನಿಟ್ಟಿನಲ್ಲಿ ಚೀನಾ ಮತ್ತೊಮ್ಮೆ ಯತ್ನಿಸಿದ್ದು, 11 ಸ್ಥಳಗಳ ಹೆಸರು ಬದಲಾಯಿಸಿ ಬಿಡುಗಡೆ ಮಾಡಿದೆ. ಇದನ್ನು ಭಾರತವು ತೀವ್ರವಾಗಿ ಖಂಡಿಸಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸ್ಪಷ್ಟವಾಗಿ ಹೇಳಿ ತಿರುಗೇಟು ನೀಡಿದೆ.

ಇದನ್ನೂ ಓದಿ:ಪಪುವಾ ನ್ಯೂಗಿನಿಯಾದಲ್ಲಿ ಪ್ರಬಲ ಭೂಕಂಪ.. 300ಕ್ಕೂ ಹೆಚ್ಚು ಮನೆಗಳು ನಾಶ, ನಾಲ್ವರು ಸಾವು

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ದಕ್ಷಿಣ ಟಿಬೆಟ್ ಅಡಿಯಲ್ಲಿ ಅರುಣಾಚಲ ಪ್ರದೇಶದಲ್ಲಿ 11 ಸ್ಥಳಗಳ ಹೆಸರು ಘೋಷಿಸಿದೆ. ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಮೂರನೇ ಹಂತದಲ್ಲಿ ಈ ಹೆಸರು ಬಿಡುಗಡೆ ಮಾಡಲಾಗಿದೆ ಎಂದು ಚೀನಾ ಸರ್ಕಾರ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ಪಟ್ಟಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಎರಡು ಭೂಪ್ರದೇಶಗಳು, ಎರಡು ನದಿಗಳು, ಐದು ಪರ್ವತಗಳು ಮತ್ತು ಎರಡು ವಸತಿ ಪ್ರದೇಶಗಳು ಒಳಗೊಂಡಿವೆ. ಚೀನಾವು ಭಾನುವಾರ ಈ 11 ಸ್ಥಳದ ಹೆಸರುಗಳನ್ನು ಬಿಡುಗಡೆ ಮಾಡಿದೆ. ಇದನ್ನು "ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ" ಎಂದು ಕರೆಯಲಾಗುತ್ತದೆ. ಈ ಭೌಗೋಳಿಕ ಹೆಸರು ನಿಯಮಗಳನ್ನು ಚೀನಾ ಕ್ಯಾಬಿನೆಟ್ ಹೊರಡಿಸಿದೆ ಎಂದು ವರದಿ ಉಲ್ಲೇಖಿಸಿದೆ.

ವಾಸ್ತವತೆ ಬದಲಾಗಲ್ಲ - ಭಾರತದ ತಿರುಗೇಟು: ಚೀನಾದಿಂದ ಅರುಣಾಚಲ ಪ್ರದೇಶದ ಸ್ಥಳಗಳ ಮರು ನಾಮಕರಣದ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಕ್ಷೇಪ ಮತ್ತು ಖಂಡನೆ ವ್ಯಕ್ತಪಡಿಸಿದೆ. ಚೀನಾ ಇಂತಹ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ. ಇಂತಹ ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಇದು ಮೂರನೇ ಬಾರಿ:ಅರುಣಾಚಲ ಪ್ರದೇಶದ ಮೇಲೆ ಚೀನಾ ತನ್ನ ಹಕ್ಕುಗಳನ್ನು ಬಹಿರಂಗವಾಗಿ ಘೋಷಿಸಿರುವುದು ಇದು ಮೂರನೇ ಬಾರಿ. ಈ ಮೊದಲು 2017ರಲ್ಲಿ ಚೀನಾ ಮೊದಲ ಬಾರಿಗೆ ದಕ್ಷಿಣ ಟಿಬೆಟ್‌ನಲ್ಲಿ ಆರು ಸ್ಥಳಗಳ ಹೆಸರು ಬದಲಾಯಿಸುವ ಪಯತ್ನ ಮಾಡಿತ್ತು. ನಂತರ 2021ರಲ್ಲೂ ಮತ್ತೆ 15 ಸ್ಥಳಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಇಂತಹದ್ದೇ ಪ್ರಯತ್ನವನ್ನು ಚೀನಾ ಮಾಡಿದೆ.

ಅಲ್ಲದೇ, ಯಾವಾಗಲೂ ಚೀನಾ ಸೇನೆಗಳ ಕಣ್ಣುಗಳು ಅರುಣಾಚಲ ಪ್ರದೇಶದ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಲೇ ಇದೆ. ಡಿಸೆಂಬರ್ 9ರಂದು ಚೀನಾ ಸೈನಿಕರು ತವಾಂಗ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಆಗ ಕೆಚ್ಚೆದೆಯ ಭಾರತೀಯ ಸೇನೆಯ ಭಾರೀ ಪ್ರತಿಭಟನೆಯಿಂದ ಚೀನಾ ಯತ್ನ ವಿಫಲವಾಗಿತ್ತು. ಚೀನಾ ಸೈನಿಕರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ:ಮೆಕ್​ ಮಹೊನ್​ ರೇಖೆಯೇ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕ, ಚೀನಾಗೆ ಹಿನ್ನಡೆ

ABOUT THE AUTHOR

...view details