ಕರ್ನಾಟಕ

karnataka

ETV Bharat / bharat

Monkeypox death in Kerala.. ಮಂಕಿಪಾಕ್ಸ್​ಗೆ ದೇಶದಲ್ಲಿ ಮೊದಲು ಸಾವು; ಹೈಅಲರ್ಟ್​ - Pune Virology Lab

ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿನ ಲಕ್ಷಣವುಳ್ಳ ವ್ಯಕ್ತಿ ಸಾವು- ದೇಶದಲ್ಲಿ ಮಂಕಿಪಾಕ್ಸ್​ಗೆ ಮೊದಲ ಬಲಿ- ಆರೋಗ್ಯ ಇಲಾಖೆಯಿಂದ ಉನ್ನತ ಮಟ್ಟದ ಪರಿಶೀಲನೆ

India records first death due to monkeypox
India records first death due to monkeypox

By

Published : Aug 1, 2022, 2:23 PM IST

Updated : Aug 1, 2022, 4:54 PM IST

ತ್ರಿಶೂರ್‌ (ಕೇರಳ) :ಕೇರಳದ ತ್ರಿಶೂರ್‌ನಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಕಾಯಿಲೆಯ ಸಾವು ವರದಿಯಾಗಿದೆ. ಚಾವಕ್ಕಾಡ್‌ನ ಕುರಿನಿಯೂರು ಮೂಲದ 22 ವರ್ಷದ ಯುವಕನೋರ್ವ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪುಣೆ ವೈರಾಲಜಿ ಲ್ಯಾಬ್‌ನ ಫಲಿತಾಂಶ ದೃಢಪಡಿಸಿದೆ.

ಮೃತ ವ್ಯಕ್ತಿ ಜುಲೈ 21 ರಂದು ಯುನೈಟೆಡ್ ಅರ್ಬನ್ ಎಮಿರೇಟ್ಸ್‌ನಿಂದ ಕೇರಳಕ್ಕೆ ಆಗಮಿಸಿದ್ದರು. ಈ ಬಗ್ಗೆ ವಿದೇಶದಲ್ಲೇ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಪಾಸಿಟಿವ್ ಎಂಬುದು ಗೊತ್ತಾಗಿತ್ತು. ಯುವಕ ವಿಷಯ ಮರೆಮಾಚಿ ಕೇರಳಕ್ಕೆ ಬಂದಿದ್ದರು. ಈ ಬಗ್ಗೆ ಆರೋಗ್ಯ ಇಲಾಖೆ ಬಳಿ ಮಾಹಿತಿ ಇದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಸಾವಿನ ಹಿನ್ನೆಲೆ ಕೇರಳ ಸರ್ಕಾರ ಮತ್ತಷ್ಟು ಅಲರ್ಟ್ ಆಗಿದೆ. ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಜೊತೆಗಿನ ಪ್ರಾಥಮಿಕ ಸಂಪರ್ಕ ಹೊಂದಿದವರು ಮತ್ತು ಆತ ಸಂಚರಿಸಿದ ಮಾರ್ಗದ ಕುರಿತು ನಕ್ಷೆ ಸಿದ್ಧಪಡಿಸಲಾಗುತ್ತಿದೆಯಂತೆ.

ಕೇರಳದ ಸೋಂಕಿತ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ. ಆದ್ರೆ ಇವರ ಸಾವು ಮಂಕಿಪಾಕ್ಸ್​​ನಿಂದಲೇ ಆಗಿದೆ ಎಂಬುದರ ಕುರಿತು ಇಂದು ಸ್ಪಷ್ಟ ಮಾಹಿತಿ ಹೊರಬಿದ್ದಿದೆ.

Last Updated : Aug 1, 2022, 4:54 PM IST

ABOUT THE AUTHOR

...view details