ನವದೆಹಲಿ: ನಿನ್ನೆಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, 7,240 ಹೊಸ ಕೇಸ್ಗಳು ದಾಖಲಾಗಿವೆ. ನಿನ್ನೆ ದೇಶದಲ್ಲಿ 5,233 ಪ್ರಕರಣ ದಾಖಲಾಗಿದ್ದವು. ಆದರೆ, ಇದೀಗ ಅದರಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಆದರೆ, ಕಳೆದ 24 ಗಂಟೆಗಳಲ್ಲಿ 3,591 ಜನರು ಕೋವಿಡ್ನಿಂದ ಗುಣಮುಖರಾಗಿದ್ದು, 8 ಜನರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಕೋವಿಡ್.. 7 ಸಾವಿರದ ಗಡಿ ದಾಟಿದ ಹೊಸ ಪ್ರಕರಣಗಳು! - ಭಾರತ ಕೋವಿಡ್ ಸುದ್ದಿ
ಭಾರತದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ನಿನ್ನೆಗೆ ಹೋಲಿಕೆ ಮಾಡಿದಾಗ ಇಂದು ಆ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ.

ಕೋವಿಡ್
ಸದ್ಯ ದೇಶದಲ್ಲಿ 32,498 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕೋವಿಡ್ನಿಂದ ಇಲ್ಲಿಯವರೆಗೆ 4,26,40,301 ಜನರು ಗುಣಮುಖರಾಗಿದ್ದು, 5,24,723 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ 194 ಕೋಟಿ ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ. .
ಓದಿ:ಭಾರತದಲ್ಲಿ ಮತ್ತಷ್ಟು ಹೆಚ್ಚಾಯ್ತು ಕೋವಿಡ್.. 5,233 ಹೊಸ ಪ್ರಕರಣ ದಾಖಲು