ನವದೆಹಲಿ:ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದು, ಇದೀಗ ಕಳೆದ 24 ಗಂಟೆಯಲ್ಲಿ 47,905 ಹೊಸ ಕೇಸ್ಗಳು ಪತ್ತೆಯಾಗಿವೆ.
24 ಗಂಟೆಯಲ್ಲಿ 47,905 ಹೊಸ ಕೇಸ್: ಭಾರತದಲ್ಲಿ 86 ಲಕ್ಷ ದಾಟಿದ ಸೋಂಕಿತರ ಸಂಖ್ಯೆ - 47 ಸಾವಿರ ಕೊರೊನಾ ಸೋಂಕಿತರು ಪತ್ತೆ
ಭಾರತದಲ್ಲಿ 86,83,917 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,89,294 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ 86 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ಭಾರತದಲ್ಲಿ 86,83,917 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,89,294 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಕಳೆದ 24 ಗಂಟೆಗಳಲ್ಲಿ 550 ಜನರು ಸಾವನ್ನಪ್ಪಿದ್ರೆ, ಬರೋಬ್ಬರಿ 52,718 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 80,66,502 ಜನರು ಗುಣಮುಖರಾಗಿದ್ದಾರೆ.
Last Updated : Nov 12, 2020, 10:31 AM IST