ನವದೆಹಲಿ: ಕಳೆದ 24 ಗಂಟೆಗಳಲ್ಲಿ 243 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ ಪ್ರಸ್ತುತ 3,609 ಸಕ್ರಿಯ ಪ್ರಕರಣಗಳಿವೆ. ಇದು ಶೇಕಡಾ 0.01 ರಷ್ಟಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 4,41,43,850 ಜನ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದ ಪ್ರಸ್ತುತ ಚೇತರಿಕೆ ದರವು ಶೇಕಡಾ 98.8 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಒಟ್ಟು 220.09 ಜನರಿಗೆ ಲಸಿಕೆ: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ಕೇಂದ್ರವು ಒಟ್ಟು 220.09 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿದೆ. ಅದರಲ್ಲಿ 95.13 ಕೋಟಿ ಎರಡನೇ ಡೋಸ್‌ಗಳು ಮತ್ತು 22.39 ಕೋಟಿ ಮುನ್ನೆಚ್ಚರಿಕೆ ಡೋಸ್‌ಗಳಾಗಿವೆ ಎಂದು ಅದು ಹೇಳಿದೆ. ಕಳೆದ 24 ಗಂಟೆಗಳಲ್ಲಿ 81,097 ಕೊರೊನಾ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ:ಚೀನಾದಿಂದ ಬಂದ ತಾಯಿ ಮಗಳಿಗೆ ಕೊರೊನಾ ಪಾಸಿಟಿವ್..ಸೂರತ್ನಲ್ಲಿ ದುಬೈನಿಂದ ಬಂದ ಯುವಕನಿಗೆ ಕೋವಿಡ್
ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ ದೈನಂದಿನ ಧನಾತ್ಮಕತೆಯ ದರ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು ಶೇ 0.11 ರಷ್ಟಿದೆ ಮತ್ತು ಶೇಕಡಾ 0.16 ರಷ್ಟಿದೆ. ಭಾರತವು ಇದುವರೆಗೆ 91.05 ಕೋಟಿ ಪರೀಕ್ಷೆಗಳನ್ನು ನಡೆಸಿದೆ. ಅದರಲ್ಲಿ ಕಳೆದ 24 ಗಂಟೆಗಳಲ್ಲಿ 2,13,080 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ.
ವಿದೇಶಿ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯ:ಜಾಗತಿಕ ಮಟ್ಟದಲ್ಲಿ ಕೋವಿಡ್ -19 ಸೋಂಕು ಉಲ್ಬಣವಾಗುತ್ತಿದೆ. ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥಾಯ್ಲೆಂಡ್ನಿಂದ ಭಾರತಕ್ಕೆ ಪ್ರಯಾಣಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ - ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಲ್ಲದೇ ಈ ಬಗ್ಗೆ ಏರ್ ಸುವಿಧಾ ಪೋರ್ಟಲ್‌ನಲ್ಲಿ ವರದಿಯನ್ನು ಜನವರಿ 1, 2023 ರಿಂದ ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.