ಡೆಹ್ರಾಡೂನ್ (ಉತ್ತರಾಖಂಡ): ಇಂದು ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ನಡೆದ ಪಾಸಿಂಗ್ ಔಟ್ ಪರೇಡ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೆಡೆಟ್‌ಗಳ ಗೌರವ ವಂದನೆ ಸ್ವೀಕರಿಸಿದರು. ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತೀರ್ಣರಾದ 319 ಯುವ ಅಧಿಕಾರಿಗಳು ಸೇನೆಗೆ ಸೇರ್ಪಡೆಯಾಗಿದ್ದಾರೆ.
ಪಾಸಿಂಗ್ ಔಟ್ ಪರೇಡ್ನಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭಾಷಣ.. 1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಜಯಗಳಿಸಿ 50 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಈ ಬಾರಿಯ ಐಎಂಎ ಪರೇಡ್ ಅನ್ನು ಸ್ಮರಣೀಯವಾಗಿಸಲು ಸಿದ್ಧತೆ ನಡೆಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಕೂಡ ಆಗಮಿಸಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿದ್ದು, ಕೂನೂರು ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಬೇಕಾಯಿತು.
ಇದನ್ನೂ ಓದಿ: ರಾವತ್ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟ: ಕ್ಯಾ. ವರುಣ್ ಸಿಂಗ್ ಜೀವ ಉಳಿಸಲು ವೈದ್ಯರ ಸರ್ವ ಪ್ರಯತ್ನ: ನಮೋ
ರಾವತ್ ಹಾಗೂ ಇತರ 11 ಸೇನಾ ಸಿಬ್ಬಂದಿ ನಿಧನ ಹಿನ್ನೆಲೆ ನಡೆದ ಪಾಸಿಂಗ್ ಔಟ್ ಪರೇಡ್ ಅನ್ನು ಬೆಳಕು ಮತ್ತು ಧ್ವನಿ ಪ್ರದರ್ಶನವಿಲ್ಲದೆ ಸರಳವಾಗಿ ಆಯೋಜಿಸಲಾಗಿತ್ತು. ಇಂದು ಸೇನೆಗೆ ಸೇರ್ಪಡೆಯಾದ 319 ಅಧಿಕಾರಿಗಳ ಪೈಕಿ ಉತ್ತರಪ್ರದೇಶ ಮತ್ತು ಉತ್ತರಾಖಂಡ ಮೂಲದ ಕೆಡೆಟ್‌ಗಳs ಹೆಚ್ಚಿದ್ದಾರೆ.