ಹೈದರಾಬಾದ್:ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕವು ರಾಷ್ಟ್ರಗಳ ವಿವಿಧ ಕ್ಷೇತ್ರಗಳು ಮತ್ತು ಆರ್ಥಿಕತೆಗಳನ್ನು ಹಾಳುಮಾಡಿದೆ. ಮುಖ್ಯವಾಗಿ ಮಹಿಳೆಯರ ಜೀವನ ಪರಿಸ್ಥಿತಿಗಳ ಮೇಲೂ ಹೊಡೆತ ಬಿದ್ದಿದೆ. ವಿಶೇಷವಾಗಿ ಭಾರತದಲ್ಲಿ ಲಿಂಗ ಸಮಾನತೆಗೆ ದೊಡ್ಡ ಹಿನ್ನೆಡೆಯಾಗಿದ್ದು ವರದಿಯ ಮೂಲಕ ಗೊತ್ತಾಗಿದೆ.
ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಒಟ್ಟು 156 ದೇಶಗಳನ್ನು ಒಳಗೊಂಡ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ ಭಾರತ 28 ಸ್ಥಾನಗಳಷ್ಟು ಇಳಿದು 140 ನೇ ಸ್ಥಾನಕ್ಕೆ ತಲುಪಿದೆ. 2020ರಲ್ಲಿ ಭಾರತವು 153 ದೇಶಗಳಲ್ಲಿ 112ನೇ ಸ್ಥಾನದಲ್ಲಿತ್ತು.
ಈ ಸೂಚ್ಯಂಕದಲ್ಲಿ ಪಾಕಿಸ್ತಾನ (153) ಅಫ್ಘಾನಿಸ್ತಾನ (156) ಸ್ಥಾನದಲ್ಲಿವೆ. ಬಾಂಗ್ಲಾದೇಶ (56), ನೇಪಾಳ (106), ಶ್ರೀಲಂಕಾ (116) ಮತ್ತು ಭೂತಾನ್ (130) ಸ್ಥಾನದಲ್ಲಿದ್ದು, ಭಾರತಕ್ಕಿಂತ ಉತ್ತಮವಾಗಿದೆ.
ಜಾಗತಿಕ ಅಂದಾಜಿನ ಪ್ರಕಾರ, ಪುರುಷರಿಗೆ ಹೋಲಿಸಿದರೆ ಮಹಿಳೆಯರ ಗಳಿಕೆ ಕೇವಲ ಐದನೇ ಒಂದು ಭಾಗವಾಗಿದೆ. ವಿಶ್ವದಲ್ಲಿ ಸ್ತ್ರೀ ಆದಾಯ ಕಡಿಮೆ ಇರುವ ಕೊನೆಯ ಹತ್ತು ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಬಾಲಕ ಮತ್ತು ಬಾಲಕಿಯರ ನಡುವಿನ ಶೈಕ್ಷಣಿಕ ಅಂತರವು ಕಡಿಮೆಯಾಗಿದ್ದರೂ, ಸ್ತ್ರೀ ಸಾಕ್ಷರತೆಗೆ ಹೋಲಿಸಿದರೆ ಪುರುಷರ ಸಾಕ್ಷರತೆ ಶೇಕಡಾ 17.6 ರಷ್ಟಿದೆ. ಮಹಿಳೆಯರ ಸಾಕ್ಷರತೆ ಶೇಕಡಾ 34.2 ರಷ್ಟಿದೆ.