ನವದೆಹಲಿ:ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆಯೇ ಭಾರತ ರಷ್ಯಾದಿಂದ ಎಸ್- 400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಸಿಮ್ಯುಲೇಟರ್ಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿದೆ. ಇದರಲ್ಲಿ ಸ್ಕ್ವಾಡ್ರನ್ ಮತ್ತು ಸಿಮ್ಯುಲೇಟರ್ಗಳು ಹಾಗೂ ತರಬೇತಿ ಸಂಬಂಧಿತ ಉಪಕರಣಗಳು ಮಾತ್ರ ಇವೆ. ಕ್ಷಿಪಣಿಗಳು ಅಥವಾ ಲಾಂಚರ್ಗಳನ್ನು ಒಳಗೊಂಡಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಮಧ್ಯೆಯೇ ವಿಮಾನಗಳ ಎಂಜಿನ್ ಮತ್ತು ಬಿಡಿಭಾಗಗಳನ್ನು ಖರೀದಿಸಿದ ಬಳಿಕ ಇದೀಗ ಸಿಮ್ಯುಲೇಟರ್ಗಳನ್ನು ಪಡೆದುಕೊಂಡಿದೆ. ಇದಕ್ಕೆ ಯಾವ ರೀತಿಯಾಗಿ ಹಣ ಸಂದಾಯ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಭಾರತೀಯ ರಕ್ಷಣಾ ಪಡೆಗಳು ಇತ್ತೀಚೆಗೆ ರಷ್ಯನ್ನರಿಂದ ಯುದ್ಧ ಸಾಮಗ್ರಿಗಳನ್ನು ಪಡೆದುಕೊಂಡಿದೆ. ದೇಶಕ್ಕೆ ಅವುಗಳನ್ನು ರಷ್ಯಾ ಸಾಗಿಸುತ್ತಿದೆ. ನಮ್ಮ ಪಡೆಗಳಿಗೆ ಯುದ್ಧ ಸಾಮಗ್ರಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.