ಕರ್ನಾಟಕ

karnataka

ETV Bharat / bharat

ಒಲಿಂಪಿಕ್​ನಲ್ಲಿ ಭಾಗವಹಿಸುವವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಕೋವಿಡ್​ನಿಂದ ಮುಂದೂಡಲ್ಪಟ್ಟಿರುವ ಒಲಿಂಪಿಕ್ ಪಂದ್ಯ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

India proud of its Olympians' contributions to sports: PM Modi
ಒಲಿಂಪಿಕ್​ನಲ್ಲಿ ಭಾಗವಹಿಸುವವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

By

Published : Jun 23, 2021, 1:12 PM IST

ನವದೆಹಲಿ:ಈವರೆಗೆ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ದೇಶಕ್ಕೆ ಹೆಮ್ಮೆ ತಂದುಕೊಟ್ಟ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇಂದು ಒಲಿಂಪಿಕ್ ದಿನವಾದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ಸಾಧನೆಯನ್ನು ಸ್ಮರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ವಿವಿಧ ಒಲಿಂಪಿಕ್​ನಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಈ ಒಲಿಂಪಿಯನ್​ಗಳು ಬೇರೆ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಇದರ ಜೊತೆಗೆ ಮತ್ತೊಂದು ಟ್ವೀಟ್ ಮಾಡಿರುವ ಅವರು, ಕೋವಿಡ್​ನಿಂದ ಮುಂದೂಡಲ್ಪಟ್ಟಿರುವ ಒಲಿಂಪಿಕ್ ಪಂದ್ಯ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ.

ಒಲಿಂಪಿಕ್ ರಸಪ್ರಶ್ನೆ

ಒಲಿಂಪಿಕ್ ಕ್ರೀಡಾಪಟುಗಳಿಗೆ ಶುಭಾಶಯ ಕೋರುವುದರ ಜೊತೆಗೆ ಟ್ವಿಟ್ಟರ್​ನಲ್ಲಿ 'ಮೈ ಗವರ್ನಮೆಂಟ್​' ವೆಬ್​ಸೈಟ್​ಗೆ ಲಿಂಕ್ ನೀಡಿರುವ ಪ್ರಧಾನಿ ಮೋದಿ, ಅಲ್ಲಿನ ಒಲಿಂಪಿಕ್ ಕುರಿತಂತೆ, ಕ್ರೀಡೆಗಳ ಕುರಿತಂತೆ, ಆಯೋಜಿಸಿರುವ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಈ ಒಲಿಂಪಿಕ್ ರಸಪ್ರಶ್ನೆ ಜೂನ್ 17ರಂದೇ ಆರಂಭವಾಗಿದ್ದು, ಜುಲೈ 22ರೊಳಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕ್ವಿಜ್​​ನಲ್ಲಿ ಗೆಲ್ಲುವ ದಿನಕ್ಕೆ ಒಬ್ಬರಿಗೆ ಇ-ಸರ್ಟಿಫಿಕೇಟ್ ಮತ್ತು ಟೀಂ ಇಂಡಿಯಾ ಜರ್ಸಿ ಅಥವಾ ತಮ್ಮ ಫೇವರಿಟ್ ಒಲಿಂಪಿಯನ್​ ಅನ್ನು ಭೇಟಿಯಾಗುವ ಅವಕಾಶ ಕೂಡಾ ಇರುವ ಸಾಧ್ಯತೆಯಿದೆ ಎಂದು ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details