ಕರ್ನಾಟಕ

karnataka

ETV Bharat / bharat

ಇಂಡೋ-ಪಾಕ್ ಒಟ್ಟಾಗಿ ಕುಳಿತು ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಬೇಕು: ತಾಲಿಬಾನ್ - ಜಮ್ಮುಕಾಶ್ಮೀರ

ಭಾರತ ಮತ್ತು ಪಾಕ್ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಒಟ್ಟಾಗಿ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ತಾಲಿಬಾನ್​ ಹೇಳಿದ್ದು ಕುತೂಹಲ ಮೂಡಿಸಿದೆ.

Taliban
ತಾಲಿಬಾನ್

By

Published : Aug 29, 2021, 4:52 PM IST

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳು ಒಟ್ಟಾಗಿ ಕುಳಿತು ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ತಾಲಿಬಾನ್ ಉಗ್ರಪಡೆಯ ನಾಯಕರು ಭಾರತ-ಪಾಕ್​​ ಕುರಿತಾಗಿ ಮೊದಲ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಹೇಳಿಕೆ ನೀಡಿದ್ದಾರೆ. ವಿವಾದಿತ ಪ್ರದೇಶ(ಜಮ್ಮುಕಾಶ್ಮೀರ)ದ ಬಗ್ಗೆ ಭಾರತ ಸಕಾರಾತ್ಮಕ ಮನೋಭಾವ ಹೊಂದಿರಬೇಕು ಎಂದು ಅವರು ಹೇಳಿದರು.

ತಾಲಿಬಾನ್,​ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಅಫ್ಘಾನ್​ ಜನರ ಹಿತಾಸಕ್ತಿಗೆ ಅನುಗುಣವಾಗಿ ಭಾರತ ತನ್ನ ವಿದೇಶಾಂಗ ನೀತಿಯನ್ನು ರೂಪಿಸಬೇಕೆಂದು ನಾವು ಬಯಸುತ್ತೇವೆ.

ಪಾಕ್​ ಹಾಗೂ ಭಾರತವು ತಮ್ಮ ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಎರಡೂ ನೆರೆಹೊರೆಯ ರಾಷ್ಟ್ರಗಳಾಗಿರುವುದರಿಂದ ವೈಷಮ್ಯ ಸರಿಯಲ್ಲ ಎಂದು ಹೇಳಿದ್ದಾರೆ. ಸದ್ಯ ಆಫ್ಘನ್​ನಲ್ಲಿ ಅಧಿಪತ್ಯ ಸ್ಥಾಪಿಸಿರುವ ತಾಲಿಬಾನ್​, ಪಾಕಿಸ್ತಾನ ತನ್ನ ಎರಡನೇ ಮನೆಯೆಂದು ಹೇಳಿದೆ. ಇದೇ ವೇಳೆ, ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯನ್ನು ಅಫ್ಘಾನ್​ ನೆಲದಲ್ಲಿ ಮಾಡುವುದಿಲ್ಲ ಎಂದು ಮುಜಾಹಿದ್ ಭರವಸೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಬೂಲ್​ ಆತ್ಮಾಹುತಿ ದಾಳಿಯಲ್ಲಿ ಮಡಿದವರಿಗೆ ಮರಳು ಶಿಲ್ಪಿ ಪಟ್ನಾಯಕ್ ನಮನ

ABOUT THE AUTHOR

...view details