ನವದೆಹಲಿ:ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನವೊಂದರಲ್ಲಿ ಕಂಡುಬರುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ, ಅಮೆರಿಕವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 81,466 ಸೋಂಕಿತರು ಕಂಡುಬಂದಿದ್ದು, ಏಪ್ರಿಲ್ ಒಂದರಂದು ಅಮೆರಿಕದಲ್ಲಿ 77,718 ಸೋಂಕಿತರು ಕಂಡುಬಂದಿದ್ದರು. ಬ್ರೆಜಿಲ್ನಲ್ಲಿ ಕಳೆದ 24 ಗಂಟೆಗಳಲ್ಲಿ 91,097 ಮಂದಿ ಸೋಂಕಿತರು ಕಂಡುಬಂದಿದ್ದಾರೆ.
ವಿಶ್ವದಲ್ಲಿ ಈಗ 13,03,63,747 ಮಂದಿ ಕೋವಿಡ್ ಸೋಂಕಿತರಿದ್ದು, ಈವರೆಗೆ 28,43,055 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 10,50,21,024 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.