ಕರ್ನಾಟಕ

karnataka

ETV Bharat / bharat

ಅಪರಾಧ ಹಿನ್ನೆಲೆಯ ಭಾರತೀಯ ಸಂಸದರ ಬಗ್ಗೆ ಸಿಂಗಾಪುರ ಪ್ರಧಾನಿ ಹೇಳಿಕೆಗೆ ಭಾರತ ಖಂಡನೆ - ಭಾರತೀಯ ರಾಜಕಾರಣಿಗಳ ಬಗ್ಗೆ ಸಿಂಗಾಪುರ ಪಿಎಂ ಹೇಳಿಕೆ

ಜವಾಹರಲಾಲ್‌ ನೆಹರೂ ಅವರ ಭಾರತದ ಲೋಕಸಭೆಯ ಸುಮಾರು ಅರ್ಧದಷ್ಟು ಸಂಸದರು ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅನೇಕ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ವಿವಾದಿತ ಹೇಳಿಕೆ ನೀಡಿದ್ದರು.

India objects to Singapore PM's comments on Indian politicians
ಸಿಂಗಾಪುರ ಸಂಸತ್​ನಲ್ಲಿ ದೇಶದ ರಾಜಕಾರಣಿಗಳ ಅವಹೇಳನ ಪ್ರಕರಣ

By

Published : Feb 18, 2022, 8:43 AM IST

ನವದೆಹಲಿ: ಭಾರತೀಯ ರಾಜಕಾರಣಿಗಳ ವಿರುದ್ಧ ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಹೇಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಂಡಿಸಿದೆ. ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ಅವರನ್ನು ಕರೆಸಿಕೊಂಡಿರುವ ವಿದೇಶಾಂಗ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಲೀ ಸೀನ್ ಲೂಂಗ್ ಅವರು ನಿನ್ನೆ ಅಲ್ಲಿನ ಸಂಸತ್ತಿನಲ್ಲಿ ಚರ್ಚೆ ನಡೆಸುವಾಗ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನೆನಪಿಸಿಕೊಂಡರು. ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸಬೇಕು ಎಂದು ವಾದಿಸುತ್ತಿರುವಾಗ ನೆಹರು ಅವರ ಬಗ್ಗೆ ಉಲ್ಲೇಖಿಸಿದರು. ಇದೇ ವೇಳೆ, ಭಾರತೀಯ ರಾಜಕಾರಣಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನೂ ಅವರು ನೀಡಿದರು. 'ನೆಹರೂ ಅವರ ಭಾರತದ ಲೋಕಸಭೆಯ ಸುಮಾರು ಅರ್ಧದಷ್ಟು ಸಂಸದರು ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅನೇಕ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆ ಪ್ರಕರಣಗಳು ಇನ್ನೂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ' ಎಂದಿದ್ದರು.

ಇದನ್ನೂ ಓದಿ:ಸಿಂಗಾಪುರ ಸಂಸತ್​ನಲ್ಲಿ ನೆಹರು ಗುಣಗಾನ... ಕಾರಣ ಇಷ್ಟೇ!

ABOUT THE AUTHOR

...view details