ಹೈದರಾಬಾದ್: ಭಾರತದಲ್ಲಿ ಮುಕ್ತ ಇಂಟರ್ನೆಟ್ ಬಳಕೆದಾರರ ಸಂಖ್ಯೆ 600 ಮಿಲಿಯನ್ ಅಂದರೆ ಸುಮಾರು 60 ಕೋಟಿಗೆ ತಲುಪಿದೆ. ನಿಯಂತ್ರಿತ ಕಂಟೆಂಟ್ ನ ಕ್ಲೋಸ್ಡ್ ಇಂಟರ್ನೆಟ್ ಬಳಕೆದಾರರಿಗಿಂತ ಈ ಸಂಖ್ಯೆ 62 ಮಿಲಿಯನ್ ಅಂದರೆ 6.2 ಕೋಟಿಗೆ ಹೆಚ್ಚಾಗಿದೆ. ನ್ಯೂಸ್ ಹಾಗೂ ದಿನನಿತ್ಯ ನೋಡುವ ವೆಬ್ಸೈಟ್ಗಳು, ಓಟಿಟಿ (over the top) ಮತ್ತು ಕನೆಕ್ಟೆಡ್ ಟಿವಿ (CTV), ಮ್ಯೂಸಿಕ್ ಸ್ಟ್ರೀಮಿಂಗ್ ಮತ್ತು ಆನ್ಲೈನ್ ಗೇಮಿಂಗ್ ಇವೆಲ್ಲವೂ ಮುಕ್ತ ಇಂಟರ್ನೆಟ್ ವ್ಯಾಪ್ತಿಗೆ ಬರುತ್ತವೆ. ಕಳೆದ ವರ್ಷದಲ್ಲಿ, ಐದರಲ್ಲಿ ನಾಲ್ಕು ಗ್ರಾಹಕರು (ಶೇ 80) ತಮ್ಮ ಮುಕ್ತ ಇಂಟರ್ನೆಟ್ ಬಳಕೆಯನ್ನು ಹೆಚ್ಚಿಸಿದ್ದಾರೆ ಎಂದು ಜಾಗತಿಕ ಜಾಹೀರಾತು ತಂತ್ರಜ್ಞಾನ ವಿಶ್ಲೇಷಕ ಕಂಪನಿಗಳಾದ ದಿ ಟ್ರೇಡ್ ಡೆಸ್ಕ್ ಮತ್ತು ಕಾಂಟರ್ ಹೇಳಿವೆ.
ಸಂಶೋಧನೆಗಳ ಪ್ರಕಾರ ಗ್ರಾಹಕರು ಸರಾಸರಿ ತಿಂಗಳಿಗೆ ಡಿಜಿಟಲ್ ಮಾಧ್ಯಮದಲ್ಲಿ ಕಳೆಯುವ 307 ಗಂಟೆಗಳಲ್ಲಿ ಅರ್ಧದಷ್ಟು (52 ಪ್ರತಿಶತ) ಸಮಯವನ್ನು ಓಪನ್ ಇಂಟರ್ನೆಟ್‌ನಲ್ಲಿ ಕಳೆಯುತ್ತಾರೆ. ಇದನ್ನು ಹೊರತುಪಡಿಸಿ ಇಂಟರ್ನೆಟ್ನಲ್ಲಿರುವ ಮತ್ತೊಂದು ರೀತಿಯ ವಿಷಯವಸ್ತುವನ್ನು ವಾಲ್ಡ್ ಗಾರ್ಡನ್ (walled gardens) ಎಂದು ಕರೆಯಲಾಗುತ್ತದೆ. ಸೋಷಿಯಲ್ ಮೀಡಿಯಾ, ಬಳಕೆದಾರರು ತಯಾರಿಸಿದ ಕಂಟೆಂಟ್ ಮತ್ತು ಲೈವ್ ಗೇಮ್ ಇದರಲ್ಲಿ ಬರುತ್ತವೆ. ಇವುಗಳಿಂದ ಜನ ಕ್ರಮೇಣವಾಗಿ ಮುಕ್ತ ಇಂಟರ್ನೆಟ್ನತ್ತ ವಾಲುತ್ತಿದ್ದಾರೆ.
ವಾಲ್ಡ್ ಗಾರ್ಡನ್ಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ:ಆದಾಗ್ಯೂ, ಓಪನ್ ಇಂಟರ್ನೆಟ್‌ಗೆ ಹೋಲಿಸಿದರೆ ವಾಲ್ಡ್ ಗಾರ್ಡನ್ಗಳು ಭಾರತದಲ್ಲಿ ಈಗಲೂ ಐದೂವರೆ ಪಟ್ಟು (5.5x) ಹೆಚ್ಚು ಜಾಹೀರಾತು ಪಡೆಯುತ್ತವೆ. ಹೆಚ್ಚಿನ ಬಳಕೆದಾರರು ಓಪನ್ ಇಂಟರ್ನೆಟ್‌ನಲ್ಲಿನ ಕಂಟೆಂಟ್ ಅನ್ನು ಬಳಸುತ್ತಿದ್ದರೂ, ಭಾರತದಲ್ಲಿ ಡಿಜಿಟಲ್ ಜಾಹೀರಾತುಗಳು ಓಪನ್ ಇಂಟರ್ನೆಟ್ನ ತ್ವರಿತ ಬೆಳವಣಿಗೆಯ ಲಾಭ ಪಡೆದಿಲ್ಲ ಎಂದು ಈ ವರದಿ ಹೇಳಿದೆ.