ಕರ್ನಾಟಕ

karnataka

ETV Bharat / bharat

ನೀರು ಸಂರಕ್ಷಣೆ: ಭಾರತಕ್ಕೆ ಬೇಕಿದೆ ಬೃಹತ್ ಚಳವಳಿ - water conservation

ನೀರಾವರಿ ಕೊಳಗಳು ಮತ್ತು ಜಲ ಮೂಲಗಳನ್ನು ಕೊಳೆಯಿಂದ ನಿರ್ಮೂಲನೆಗೊಳಿಸಬೇಕು ಎಂಬ ಮಾತು ಭಾರತೀಯ ಭಾಷೆಗಳಲ್ಲಿನ ಕಾವ್ಯ ಮತ್ತು ಗದ್ಯದಲ್ಲಿ ಅಪಾರವಾಗಿ ಕೇಳಿಬರುತ್ತವೆ. ಈ ಪ್ರಜ್ಞೆ ಜನರಲ್ಲಿ ಅನಾದಿಕಾಲದಿಂದಲೂ ಇತ್ತು. ಜಗತ್ತಿನ ಜನಸಂಖ್ಯೆಯಲ್ಲಿ ಶೇ.18 ರಷ್ಟನ್ನು ಭಾರತ ಹೊಂದಿದೆ. ಜಗತ್ತಿನ ಶೇ.18 ರಷ್ಟು ಜಾನುವಾರು ಭಾರತದಲ್ಲೇ ಇದೆ. ಆದರೆ, ವಿಶ್ವದ ಶೇ.4ರಷ್ಟು ಕುಡಿಯುವ ನೀರು ಮಾತ್ರ ಭಾರತದಲ್ಲಿದೆ. ಮೇಲ್ಮೈ ನೀರಿನ ಮೂಲವನ್ನು ನಿರ್ಲಕ್ಷ್ಯದಿಂದ ಹಾಳು ಮಾಡಿರುವುದು ಮತ್ತು ಅಂತರ್ಜಲವನ್ನು ಅಪಾರವಾಗಿ ಬಳಸಿರುವುದರಿಂದ ವರ್ಷದಿಂದ ವರ್ಷಕ್ಕೆ ನೀರಿನ ಮೂಲದ ಕೊರತೆ ಉಂಟಾಗುತ್ತಿದೆ.

India needs water conservation
ನೀರು ಸಂರಕ್ಷಣೆಗೆ ಭಾರತಕ್ಕೆ ಬೇಕಿದೆ ಬೃಹತ್ ಚಳವಳಿ

By

Published : Mar 5, 2021, 3:10 PM IST

ಹೈದರಾಬಾದ್: ಈ ಭೂಮಿಯ ಮೇಲಿರುವ ಪ್ರತಿ ಜೀವಿಗೂ ಅತ್ಯಂತ ಅಗತ್ಯವಾಗಿರುವ ನೀರನ್ನು ಎಲ್ಲರೂ ತಮ್ಮ ಜೀವನದಲ್ಲಿ ಅತ್ಯಂತ ಅಮೂಲ್ಯ ಸಂಪತ್ತು ಎಂಬಂತೆ ಪರಿಗಣಿಸಬೇಕಿದೆ. ಆದರೆ, ನಮ್ಮಲ್ಲಿ ಈ ಪ್ರಜ್ಞೆಯ ಕೊರತೆಯಿಂದಾಗಿ, ಇಡೀ ದೇಶದಲ್ಲಿ ಭಾರಿ ನೀರಿನ ವಿಪತ್ತು ಕಂಡುಬರುತ್ತಿದೆ. ಎರಡೂವರೆ ವರ್ಷಗಳ ಹಿಂದೆಯೇ ನೀತಿ ಆಯೋಗ ಈ ಬಗ್ಗೆ ಎಚ್ಚರಿಕೆ ನೀಡಿದೆ.

ದೇಶದ ಶೇ. 60 ರಷ್ಟು ಜನರಿಗೆ ನೀರಿನ ಸಮಸ್ಯೆಯಿದೆ. ನೀರಿನ ಲಭ್ಯತೆಯನ್ನು ಹೋಲಿಕೆ ಮಾಡಿದರೆ 2030 ರ ವೇಳೆಗೆ ಈ ಅಗತ್ಯ ದುಪ್ಪಟ್ಟಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿತ್ತು. ಆಯೋಗ ನಡೆಸಿದ ಒಂದು ಅಧ್ಯಯನದಲ್ಲಿ, ದೇಶದ 70 ಶೇ. ನೀರು ಮಾಲಿನ್ಯಗೊಂಡಿದೆ. ಇದರಿಂದಾಗಿ ಪ್ರತಿ ವರ್ಷ ಎರಡು ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸನ್ನಿವೇಶದಿಂದಾಗಿ ಜಿಡಿಪಿಯಲ್ಲಿ ಶೇ.6ರಷ್ಟು ನಷ್ಟ ಅನುಭವಿಸುತ್ತಿದೆ ಎಂದು ಆಯೋಗ ಹೇಳಿದೆ.

ಎರಡನೇ ಅವಧಿಗೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಎಲ್ಲ ಗ್ರಾಮ ಪಂಚಾಯಿತಿಗಳಿಗೂ 12 ಭಾಷೆಗಳಲ್ಲಿ ಪತ್ರ ಬರೆದು ಮಳೆ ನೀರು ಸಂಗ್ರಹ ಕಾರ್ಯದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ. ಪ್ರಸ್ತುತ ಅವರು ಜಲ ಸಂರಕ್ಷಣೆಯಲ್ಲಿ 100 ದಿನದ ಕ್ರಿಯಾಯೋಜನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.ಇತ್ತೀಚಿನ ಮನ್‌ ಕಿ ಬಾತ್‌ನಲ್ಲಿ, ಜಲ ಸಂರಕ್ಷಣೆಯ ಕ್ಯಾಂಪೇನ್ ಅನ್ನು ಜಲ ಶಕ್ತಿ ಸಚಿವಾಲಯ ನಡೆಸಲಿದೆ ಪ್ರಧಾನಿ ಹೇಳಿದ್ದಾರೆ.

2003ರಲ್ಲಿ ವಾಜಪೇಯಿ ಕನಸಿಗೆ ಜಲ ಸಂರಕ್ಷಣೆಯ ಕುರಿತು ಮೋದಿ ನೀಡಿರುವ ಸಂದೇಶ ಪೂರಕವಾಗಿದೆ. ಜಲ ಯಜ್ಞಮ್‌ ಚಳವಳಿಯಿಂದ ಇಡೀ ದೇಶವನ್ನೇ ತೆಲುಗು ನಾಡು ಎಚ್ಚರಿಸಿತ್ತು. ಇದರಿಂದಾಗಿ ನದಿಗಳು, ಕೆರೆಗಳು ಮತ್ತು ಕೊಳಗಳ ಹೂಳೆತ್ತುವ ಕೆಲಸವನ್ನು ಆಗಿನ ಪ್ರಧಾನಿ ವಾಜಪೇಯಿ ಹಮ್ಮಿಕೊಂಡಿದ್ದರು. ಜಲ ಸಂರಕ್ಷಣೆಯಲ್ಲಿ ವಿಜ್ಞಾನ ಸಮುದಾಯವು ಕಡಿಮೆ ವೆಚ್ಚದ ವಿಧಾನಗಳನ್ನು ಕಂಡುಕೊಳ್ಳುವಲ್ಲಿ ಶ್ರಮಿಸಬೇಕು ಎಂದು ಅವರು ಬಯಸಿದ್ದರು. ಆದರೆ, ಇದಕ್ಕೆ ಸೂಕ್ತ ಫಾಲೋ ಅಪ್ ಇಲ್ಲದ್ದರಿಂದಾಗಿ, ಅಮೂಲ್ಯವಾದ ಜಲ ಸಂಪನ್ಮೂಲವನ್ನು ನಿರ್ಲಕ್ಷಿಸಲಾಯಿತು ಮತ್ತು ಅಪಾಯದ ಗಂಟೆ ಎಲ್ಲೆಡೆ ಬಾರಿಸಲು ಆರಂಭವಾಗಿತ್ತು.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ.ಇದರಿಂದಾಗಿ, ಜಲಕ್ಷಾರ ಇರುವ ಪ್ರದೇಶಗಳಲ್ಲೂ ಈಗ ಪ್ರವಾಹ ಉಂಟಾಗುತ್ತಿದೆ. ಈ ಸನ್ನಿವೇಶವನ್ನು ಬದಲಿಸಲು ಜನರೇ ಸ್ವತಃ ಮುಂದಾಗುವವರೆಗೆ ಈ ಸಮಸ್ಯೆ ಮುಂದುವರಿಯುತ್ತಲೇ ಇರುತ್ತದೆ.

100 ದಿನಗಳಲ್ಲಿ ಬಹುತೇಕ ಶೇ. 70 ರಷ್ಟು ವಾರ್ಷಿಕ ಮಳೆ ಪ್ರಮಾಣ ಇದ್ದರೂ, ಮಳೆ ನೀರನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ದೇಶದ ಜನರಿಗೆ ಸುಳಿವೂ ಇಲ್ಲ. ಅಪಾಯಕಾರಿ ಭವಿಷ್ಯವನ್ನು ದೇಶ ಎದುರು ನೋಡುತ್ತಿದೆ. ದೇಶದಲ್ಲಿ ವರ್ಷದ ಉಳಿದ ದಿನಗಳ ನೀರಿನ ಅಗತ್ಯವನ್ನು ಪೂರೈಸುವ ಯಾವುದೇ ವಿಧಾನವೂ ಉಳಿದಿಲ್ಲ. ಕೆಲವೇ ದಶಕಗಳ ಹಿಂದಿನವರೆಗೂ, ದೇಶದಲ್ಲಿನ ತಲಾ ಜಲ ಲಭ್ಯತೆಯು 5000 ಕ್ಯೂಬಿಕ್ ಮೀಟರುಗಳಾಗಿದ್ದವು. ಇಂದು, ಇದು 1486 ಕ್ಯೂಬಿಕ್‌ ಮೀಟರಿಗೆ ಕುಸಿದಿದೆ. 2031 ರ ವೇಳೆಗೆ, ತಲಾ ನೀರಿನ ಪ್ರಮಾಣವು 1367 ಕ್ಯೂಬಿಕ್ ಮೀಟರಿಗೆ ಕುಸಿಯಲಿದೆ. ಇಷ್ಟೇ ಅಲ್ಲ, ಲಭ್ಯ ನೀರಿನ ಗುಣಮಟ್ಟದ ಪ್ರಮಾಣದ ಮೇಲೂ ಇದು ಪರಿಣಾಮ ಬೀರಲಿದೆ.

ಈ ಸನ್ನಿವೇಶವನ್ನು ಯಾರೋ ಬಂದು ಸರಿಪಡಿಸುತ್ತಾರೆ ಎಂಬ ವರ್ತನೆಯನ್ನು ಜನರು ಬಿಡಬೇಕು. ವಾರ್ಷಿಕವಾಗಿ ಭಾರತಕ್ಕೆ 4 ಲಕ್ಷ ಕ್ಯೂಬಿಕ್ ಮೀಟರು ನೀರು ಮಳೆಯ ಮೂಲಕ ಸಿಗುತ್ತಿದೆ. ಆದರೆ, ಇದರಲ್ಲಿ ಕಾಲುಭಾಗವನ್ನು ಮಾತ್ರ ಬಳಸಿಕೊಳ್ಳಲು ನಮಗೆ ಸಾಧ್ಯವಾಗಿದೆ. ಸರಿಯಾಗಿ ಯೋಜನೆಯನ್ನು ರೂಪಿಸಿ ಕನಿಷ್ಠ 2 ಲಕ್ಷ ಕೋಟಿ ಕ್ಯೂಬಿಕ್ ಮೀಟರು ಮಳೆನೀರನ್ನು ಸಂಗ್ರಹಿಸಿದರೆ, ನೀರಿನ ಲಭ್ಯತೆಯ ವಿಚಾರದಲ್ಲಿ ಸ್ವಾವಲಂಬನೆಯನ್ನು ಸಾಧಿಸಬಹುದು.

ಭಾರತಕ್ಕೆ ಹೋಲಿಸಿದರೆ ಇಸ್ರೇಲ್‌ನಲ್ಲಿ ಕಾಲುಭಾಗದಷ್ಟು ಮಳೆ ನೀರು ಲಭ್ಯವಾಗುತ್ತದೆ. ಇದು ಬರವನ್ನೇ ಅವಕಾಶವನ್ನಾಗಿ ಪರಿವರ್ತಿಸಿದೆ ಮತ್ತು ಎದುರಾಗಬಹುದಾದ ಅಪಾಯವನ್ನು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಹರಿಸಿಕೊಂಡಿದೆ. ಅಂತರ್ಜಲ ನೀರಿನ ಮಟ್ಟವನ್ನು ಮರುಪೂರಣ ಮಾಡುವಲ್ಲಿ ಇಸ್ರೇಲ್‌ನ ಯಶಸ್ಸಿನ ಕಥೆಯನ್ನು ಭಾರತ ಕಲಿಯಬೇಕಿದೆ. ಗಂಗೆಯನ್ನು ಭೂಮಿಗೆ ತಂದ ಭಗೀರಥನ ಹಾಗೆ, ದೇಶದ ಪ್ರತಿ ನಾಗರಿಕನೂ ಜಲ ಸಂಕರಕ್ಷಣೆಯ ಪಣ ತೊಡಬೇಕು. ದೇಶ ಅಪಾರ ನೀರು ಮತ್ತು ಬೆಳೆ ಫಸಲನ್ನು ಹೊಂದಬೇಕು ಎಂದಾದರೆ, ಜಲ ಸಂರಕ್ಷಣೆಯು ಸಾಮೂಹಿಕ ಚಳವಳಿಯಾಗಿ ಜಾರಿಗೊಳ್ಳಬೇಕು.

ABOUT THE AUTHOR

...view details