ನವದೆಹಲಿ :ಡಿಜಿಟಲ್ ಪ್ಲಾಂಟ್ಫಾರ್ಮ್ ವೇದಿಕೆಯ ಮೂಲಕ ಭಾರತೀಯ ಜನತಾ ಪಾರ್ಟಿಗೆ ಸವಾಲೊಡ್ಡುವ ಸಲುವಾಗಿ ಕಾಂಗ್ರೆಸ್ ಪಕ್ಷ 'ಸಾಮಾಜಿಕ ಜಾಲತಾಣದ ಯೋಧರು'( social media warriors) ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸಿದೆ. ನಮ್ಮ ದೇಶಕ್ಕೆ ಅಹಿಂಸಾತ್ಮಕ ಯೋಧರು ಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷದ ಹಿರಿಯ ಮುಖಂಡ ಪವನ್ ಕುಮಾರ್ ಬನ್ಸಾಲ್, ವಕ್ತಾರ ಪವನ್ ಖೇಡಾ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ನೇತೃತ್ವದಲ್ಲಿ ಇಂದು ಸಾಮಾಜಿಕ ಜಾಲತಾಣದ ಯೋಧರು ಎಂಬ ಅಭಿಯಾನ ಪ್ರಾರಂಭಗೊಂಡಿದೆ. ಐದು ಲಕ್ಷ ಸೋಷಿಯಲ್ ಮೀಡಿಯಾ ಯೋಧರನ್ನು ರಚಿಸುವುದು ನಮ್ಮ ಗುರಿ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.