ನವದೆಹಲಿ: 2.5 ರಂಗಗಳ ಯುದ್ಧ ಈಗಿನ ಸ್ಥಿತಿಯಲ್ಲಿ ಅಪ್ರಸ್ತುತ. ಹೀಗಾಗಿ ನಾವೀಗ ಗಡಿ ರಹಿತ ಸಮರಕ್ಕೆ ಸಿದ್ಧರಾಗಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಹಿಂದಿನ ಸವಾಲುಗಳ ಕುರಿತ ನಮ್ಮ ಕಲ್ಪನೆ ಈಗ ಅಪ್ರಸ್ತುತವಾಗಿದೆ. ಹಳೆಯ ಸಂಪ್ರದಾಯ, ಪರಂಪರೆಗೆ ಬದಲಾಗಿ ನಮ್ಮ ಕಾರ್ಯವಿಧಾನವನ್ನು ಬದಲಿಸುವ ಜತೆಗೆ ಒಂದು ದೇಶವಾಗಿ ನಾವು ಯೋಚನೆ ಮಾಡಬೇಕಿದೆ. ಇದಕ್ಕಾಗಿ ಸೀಮಾತೀತ ಹೋರಾಟಕ್ಕೆ ಭಾರತ ಸಿದ್ಧವಾಗಬೇಕು ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತ: ಮನೀಶ್ ಸಿಸೋಡಿಯಾ
2.5 ಫ್ರಂಟ್ ವಾರ್ ಎಂದರೇನು?
2.5 ರಂಗಗಳಲ್ಲಿ ಯುದ್ಧ ಅಂದರೆ ಭಾರತದ ಉತ್ತರ ಮತ್ತು ಪಶ್ಚಿಮಕ್ಕೆ ಏಕಕಾಲದಲ್ಲಿ ಸಾಂಪ್ರದಾಯಿಕ ಯುದ್ಧಕ್ಕೆ ತಯಾರಿ ನಡೆಸುವುದು. ಇದೇ ಸಮಯಕ್ಕೆ ದೇಶದ ಆಂತರಿಕ ಸವಾಲುಗಳನ್ನು ಮೆಟ್ಟಿನಿಲ್ಲುವುದು. ಇಂತಹ 2.5 ರಂಗಗಳ ಸಮರದಲ್ಲಿ ಭಾರತೀಯ ಪಡೆಗಳು ಬಹಳ ನೈಪುಣ್ಯತೆ ಸಾಧಿಸಿವೆ. ಆದರೆ ಈಗ ಇಂತಹ ಸಮರ ವಿಧಾನ ಬಳಕೆಯಲ್ಲಿಲ್ಲ ಎಂಬುದು ರಾಹುಲ್ ಗಾಂಧಿ ಅಭಿಮತ.
ಎರಡು ಯುದ್ಧ ರಂಗಗಳು ಯಾವುದೆಂದರೆ ಉತ್ತರಕ್ಕೆ ಚೀನಾ, ಪಶ್ಚಿಮಕ್ಕೆ ಕುತಂತ್ರಿ ಪಾಕಿಸ್ತಾನ, ಇನ್ನುಳಿದ ಅರ್ಧ ರಂಗ ಅಂದರೆ ತೀವ್ರವಾದಿಗಳ, ಉಗ್ರರ ಆಂತರಿಕ ಸವಾಲು. ಇದನ್ನು ಸೇನಾ ಭಾಷೆಯಲ್ಲಿ 2.5 ಫ್ರಂಟ್ ವಾರ್ ಎನ್ನುತ್ತಾರೆ.