ಕರ್ನಾಟಕ

karnataka

ETV Bharat / bharat

ಜಾಗತಿಕ ವ್ಯಾಪಾರದ ಅಡಿಪಾಯವಾಗಲಿದೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್; ಪ್ರಧಾನಿ ಮೋದಿ - ಈಟಿವಿ ಭಾರತ ಕನ್ನಡ

ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಭವಿಷ್ಯದಲ್ಲಿ ಜಾಗತಿಕ ವ್ಯಾಪಾರದ ಆಧಾರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

India Middle East Europe corridor will become basis of world trade for centuries PM Modi
India Middle East Europe corridor will become basis of world trade for centuries PM Modi

By ETV Bharat Karnataka Team

Published : Sep 24, 2023, 6:35 PM IST

ನವದೆಹಲಿ:ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ (India-Middle East-Europe corridor) ಮುಂಬರುವ ಶತಮಾನಗಳಲ್ಲಿ ವಿಶ್ವ ವ್ಯಾಪಾರದ ಆಧಾರವಾಗಲಿದೆ ಮತ್ತು ಇದರ ನಿರ್ಮಾಣದ ಪರಿಕಲ್ಪನೆ ಭಾರತದಲ್ಲಿ ಹುಟ್ಟಿತ್ತು ಎಂಬುದನ್ನು ಇತಿಹಾಸ ನೆನಪಿಸಿಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು.

ತಮ್ಮ ಮಾಸಿಕ ಮನ್ ಕಿ ಬಾತ್ ಪ್ರಸಾರದಲ್ಲಿ, ಭಾರತವು ಸಮೃದ್ಧ ಮತ್ತು ದೊಡ್ಡ ವ್ಯಾಪಾರ ಶಕ್ತಿಯಾಗಿದ್ದಾಗ ಬಳಸುತ್ತಿದ್ದ ಪ್ರಾಚೀನ ವ್ಯಾಪಾರ ಕಾರಿಡಾರ್ "ಸಿಲ್ಕ್ ರೂಟ್​" ಅನ್ನು ಮೋದಿ ನೆನಪಿಸಿಕೊಂಡರು ಮತ್ತು ಇತ್ತೀಚಿನ ಜಿ 20 ಶೃಂಗಸಭೆಯಲ್ಲಿ ದೇಶವು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್​ನ ಪರಿಕಲ್ಪನೆಯನ್ನು ರೂಪಿಸಿದೆ ಎಂದು ಹೇಳಿದರು.

ಭಾರತದ ಚಂದ್ರಯಾನ -3 ಮಿಷನ್ ಯಶಸ್ಸಿನ ನಂತರ ಭಾರತದಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿರುವುದು ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದ್ವಿಗುಣಗೊಳಿಸಿದೆ ಎಂದು ಹೇಳಿದ ಅವರು, ಜನ ತಮಗೆ ಕಳುಹಿಸಿದ ಸಂದೇಶಗಳಲ್ಲಿ ಈ ಎರಡು ಸಾಧನೆಗಳನ್ನು ಹೆಚ್ಚಾಗಿ ಕೊಂಡಾಡಿದ್ದಾರೆ ಎಂದು ಹೇಳಿದರು. ಆಫ್ರಿಕನ್ ಒಕ್ಕೂಟವನ್ನು ಜಿ 20 ಸದಸ್ಯರನ್ನಾಗಿ ಮಾಡುವಲ್ಲಿ ಯಶಸ್ವಿಯಾದ ಭಾರತದ ನಾಯಕತ್ವವನ್ನು ಜಗತ್ತು ಗುರುತಿಸಿದೆ ಎಂದು ಮೋದಿ ತಿಳಿಸಿದರು.

ಜಿ 20 ಶೃಂಗಸಭೆಯ ಆತಿಥ್ಯ ವಹಿಸಿದ್ದ ಭಾರತ್ ಮಂಟಪವು "ಸೆಲೆಬ್ರಿಟಿ" ಸ್ಥಳವಾಗಿ ಮಾರ್ಪಟ್ಟಿದೆ. ಜನ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್​ನೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದರು. ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವಾಗಿರುವುದನ್ನು ಉಲ್ಲೇಖಿಸಿದ ಅವರು, ಪ್ರವಾಸೋದ್ಯಮವು ಕನಿಷ್ಠ ಹೂಡಿಕೆಯೊಂದಿಗೆ ಗರಿಷ್ಠ ಉದ್ಯೋಗವನ್ನು ಸೃಷ್ಟಿಸುತ್ತದೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಸದ್ಭಾವನೆ ಬಹಳ ಮುಖ್ಯವಾಗಿದೆ ಎಂದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಬಗ್ಗೆ ಸದ್ಭಾವನೆ ಹೆಚ್ಚಾಗಿದೆ. ಜಿ 20 ಸಭೆಗಳೊಂದಿಗೆ ಇದು ಮತ್ತಷ್ಟು ಹೆಚ್ಚಾಗಿದೆ. ಜಿ20 ಶೃಂಗಸಭೆಯ ಅಂಗವಾಗಿ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿ ದೇಶದ ವೈವಿಧ್ಯತೆ ಮತ್ತು ಪರಂಪರೆಯನ್ನು ಕಂಡಿದ್ದಾರೆ ಎಂದು ಅವರು ಹೇಳಿದರು.

ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನವನ್ನು ಮತ್ತು ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಇತ್ತೀಚೆಗೆ ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಿರುವುದು ಅಪಾರ ಹೆಮ್ಮೆಯ ವಿಷಯವಾಗಿದೆ. ಅಂಥ ತಾಣಗಳ ಸಂಖ್ಯೆ ಈಗ ಭಾರತದಲ್ಲಿ 42 ಆಗಿದೆ ಮತ್ತು ತನ್ನ ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಹೆಚ್ಚು ಹೆಚ್ಚು ಸ್ಥಳಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಕೊಳ್ಳುವುದು ದೇಶದ ಪ್ರಯತ್ನವಾಗಿದೆ ಎಂದು ಪ್ರಧಾನಿ ತಿಳಿಸಿದರು. ಹಬ್ಬದ ಸೀಸನ್ ಬರುತ್ತಿರುವುದರಿಂದ, 'ವೋಕಲ್ ಫಾರ್ ಲೋಕಲ್' ಎಂಬುದನ್ನು ನೆನಪಿಟ್ಟುಕೊಳ್ಳಿ ಮತ್ತು 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನೇ ಖರೀದಿಸಿ ಎಂದು ಜನರಿಗೆ ಮನವಿ ಮಾಡಿದರು.

ಇದನ್ನೂ ಓದಿ :11 ರಾಜ್ಯ ಸಂಪರ್ಕಿಸುವ 9 'ವಂದೇ ಭಾರತ್​ ಎಕ್ಸ್‌ಪ್ರೆಸ್‌' ರೈಲುಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details