ನವದೆಹಲಿ:ಭಾರತದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಕೊರೊನಾ ಸೋಂಕಿತರ ಹೊಸ ಪ್ರಕರಣಗಳು ನಿತ್ಯ ಹೊರಬರುತ್ತಿವೆ. ಕೊರೊನಾ ಹೊಸ ರೂಪಾಂತರವಾದ ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಸರ್ಕಾರವು ನಿರಂತರವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಮಧ್ಯೆ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕರು ಶಾಕಿಂಗ್ ಸುದ್ದಿ ಸಹ ಕೊಟ್ಟಿದ್ದಾರೆ.
ಅಮೆರಿಕ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಹೇಳಿಕೆ ಪ್ರಕಾರ, ಭಾರತದಲ್ಲಿ, ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಪ್ರಕರಣಗಳು ಬರಬಹುದು ಎಂದು ಹೇಳಿದ್ದಾರೆ. ಒಮಿಕ್ರಾನ್ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಇವರು ಮುನ್ಸೂಚನೆ ನೀಡಿದ್ದಾರೆ.