ಕರ್ನಾಟಕ

karnataka

ETV Bharat / bharat

ಕೊಂಚ ಇಳಿಕೆಯತ್ತ ಕೊರೊನಾ: 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢ! - ಭಾರತ ಕೊರೊನಾ ಸುದ್ದಿ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,084 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

India covid report, India corona news, India covid death news, ಭಾರತ ಕೋವಿಡ್​ ವರದಿ, ಭಾರತ ಕೊರೊನಾ ಸುದ್ದಿ, ಭಾರತದಲ್ಲಿ ಕೋವಿಡ್​ ಸಾವು,
ಕೊರೊನಾ ಸೋಂಕು ದೃಢ

By

Published : Jun 13, 2022, 10:28 AM IST

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ದಾಖಲೆಯ 8,084 ಹೊಸ ಕೇಸ್‌ಗಳು​​ ದಾಖಲಾಗಿದ್ದು, 10 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 4,592 ಜನರು ಕೋವಿಡ್​​ನಿಂದ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಸದ್ಯ ದೇಶದಲ್ಲಿ 47,995 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,26,57,335 ಜನರು ಕೋವಿಡ್​ನಿಂದ ಗುಣಮುಖರಾಗಿದ್ದು, 5,24,771 ಮಂದಿ ಸಾವನ್ನಪ್ಪಿದ್ದಾರೆ.

ಓದಿ: ರಾಜ್ಯದಲ್ಲಿಂದು 463 ಮಂದಿಗೆ ಕೋವಿಡ್ ಸೋಂಕು: ಸಾವು ಶೂನ್ಯ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜೂ.11 ರವರೆಗೆ ಕೋವಿಡ್​ಗಾಗಿ 85.51 ಕೋಟಿ ಮಾದರಿಗಳನ್ನು ಇದುವರಿಗೆ ಪರೀಕ್ಷಿಸಲಾಗಿದೆ. ಈ ಪೈಕಿ 2,49,418 ಮಾದರಿಗಳನ್ನು ಶನಿವಾರ ಪರೀಕ್ಷಿಸಲಾಗಿದೆ.

ಕರ್ನಾಟಕದಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 463 ಮಂದಿಗೆ ಸೋಂಕು ದೃಢಪಟ್ಟಿದೆ. ಭಾರತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್​ನಲ್ಲಿ 195.19 ಕೋಟಿ ಮೀರಿದೆ.

ABOUT THE AUTHOR

...view details