ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 42,982 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
24 ಗಂಟೆಯಲ್ಲಿ 533 ಮಂದಿ ಮೃತಪಟ್ಟಿದ್ದು, ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 4,26,290 ಆಗಿದೆ. ಪ್ರಸ್ತುತ 4,11,076 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 3,09,74,748 ಮಂದಿ ಗುಣಮುಖರಾಗಿದ್ದಾರೆ.
ಇದನ್ನೂಓದಿ: 'ಜಗತ್ತನ್ನು ನಾಶ ಮಾಡಿದ್ದಕ್ಕೆ ಧನ್ಯವಾದ': ಚೀನಾ ವ್ಯಾಕ್ಸಿನ್ ಡಿಪ್ಲೊಮಸಿಗೆ ನೆಟ್ಟಿಗರ ವ್ಯಂಗ್ಯ
ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ ಇದುವರೆಗೆ 48,93,42,295 ಮಂದಿಗೆ ಲಸಿಕೆ ನೀಡಲಾಗಿದೆ. ಜಲೈ 30ವರೆಗೆ ಒಟ್ಟು 47,48,93,363 ಮಂದಿಯ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗಿದೆ. ಬುಧವಾರ 16,64,030 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ನಿನ್ನೆ (ಆಗಸ್ಟ್ 5) ದೇಶದಲ್ಲಿ 42,625 ಜನರಿಗೆ ವೈರಸ್ ದೃಢಪಟ್ಟಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ 4,10,353 ರಷ್ಟು ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.