ಕರ್ನಾಟಕ

karnataka

ETV Bharat / bharat

ದೇಶದಲ್ಲಿ 1,761 ಮಂದಿಗೆ ಕೊರೊನಾ ದೃಢ: 127 ಸೋಂಕಿತರು ಸಾವು - ಭಾರತದ ಕೊರೊನಾ ಪ್ರಕರಣಗಳು

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕಂಡು ಬಂದ ಕೋವಿಡ್‌ ಸೋಂಕಿತ ಪ್ರಕರಣಗಳು, ಸಾವು ಹಾಗು ಗುಣಮುಖರಾದವರ ಸಂಪೂರ್ಣ ವಿವರ ಇಲ್ಲಿದೆ.

India 24 hours covid cases report
ಭಾರತದ 24 ಗಂಟೆ ಕೊರೊನಾ ರಿಪೋರ್ಟ್

By

Published : Mar 20, 2022, 9:49 AM IST

ನವದೆಹಲಿ: ಭಾರತದಲ್ಲಿ ಕಳೆದೊಂದು ದಿನದಲ್ಲಿ 1,761 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 127 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕಿಗೊಳಗಾದ 127 ಮಂದಿ ಸಾವನ್ನಪ್ಪುವ ಮೂಲಕ ಒಟ್ಟು ಮೃತರ ಸಂಖ್ಯೆ 5,16,479ಕ್ಕೆ ಏರಿದೆ. ದಿನೇ ದಿನೇ ಸೋಂಕಿನ ಪ್ರಕರಣ ಇಳಿಮುಖವಾಗುತ್ತಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,240ಕ್ಕೆ ಇಳಿದಿದೆ. ಸದ್ಯ ಶೇ.0.06ರಷ್ಟು ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 3,196 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕೋವಿಡ್​ ಪ್ರಾರಂಭವಾದಾಗಿನಿಂದ ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದವರ ಸಂಖ್ಯೆ 4,24,65,122ರಷ್ಟಿದ್ದು, ಚೇತರಿಕೆಯ ಪ್ರಮಾಣವು ಶೇ. 98.74ರಷ್ಟು ತಲುಪಿದೆ.

ಇದುವರೆಗೆ 78.26 ಕೋಟಿ ಕೋವಿಡ್​ ಪರೀಕ್ಷೆ ಕೈಗೊಳ್ಳಲಾಗಿದೆ. ಸದ್ಯ ವಾರದ ಕೋವಿಡ್​​ ಪಾಸಿಟಿವಿಟಿ ದರವು ಶೇ. 0.41ರಷ್ಟಿದ್ದರೆ, ದೈನಂದಿನ ಕೋವಿಡ್​ ಪಾಸಿಟಿವಿಟಿ ದರ ಶೇ.0.41ರಷ್ಟಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇಂಡಿಯಾ-ಇಸ್ರೇಲ್ ಬಾಂಧವ್ಯಕ್ಕೆ 30 ವರ್ಷ: ಏಪ್ರಿಲ್​​ನಲ್ಲಿ ನಫ್ತಾಲಿ ಬೆನೆಟ್ ಭಾರತ ಭೇಟಿ

ABOUT THE AUTHOR

...view details