ಕರ್ನಾಟಕ

karnataka

ETV Bharat / bharat

12,847 ಹೊಸ ಕೋವಿಡ್-19 ಕೇಸ್ ಪತ್ತೆ: ಪ್ರಕರಣಗಳಲ್ಲಿ ತುಸು ಏರಿಕೆ - ಕೋವಿಡ್ ಪಾಸಿಟಿವಿಟಿ ರೇಟ್

ಕಳೆದ 24 ಗಂಟೆಗಳಲ್ಲಿ 7,985 ರೋಗಿಗಳು ಕೋವಿಡ್​-19 ನಿಂದ ಚೇತರಿಸಿಕೊಂಡಿದ್ದು, ಕೋವಿಡ್​-19 ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 4,26,82,697 ಆಗಿದೆ. ದೇಶದಲ್ಲಿ ಕೋವಿಡ್​-19 ನಿಂದ ಗುಣಮುಖರಾಗುವವರ ಪ್ರಮಾಣ ಶೇ 98.64 ರಷ್ಟಿದೆ.

India logs 12,847 new Covid cases, 14 deaths
India logs 12,847 new Covid cases, 14 deaths

By

Published : Jun 17, 2022, 12:42 PM IST

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯ ಪ್ರಕಾರ- ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 12,847 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೂ ಮುಂಚಿನ 24 ಗಂಟೆಗಳಲ್ಲಿ ಪತ್ತೆಯಾಗಿದ್ದ 12,213 ಪ್ರಕರಣಗಳಿಗೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆ ತುಸು ಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್​-19 ನಿಂದ 14 ಜನ ಮೃತಪಟ್ಟಿದ್ದು, ದೇಶದಲ್ಲಿ ಈವರೆಗೆ ಕೋವಿಡ್​-19 ನಿಂದ ಮೃತಪಟ್ಟವರ ಸಂಖ್ಯೆ 5,24,817 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 63,063 ಇದ್ದು, ಇದು ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಶೇ 0.15 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 7,985 ರೋಗಿಗಳು ಕೋವಿಡ್​-19 ನಿಂದ ಚೇತರಿಸಿಕೊಂಡಿದ್ದು, ಕೋವಿಡ್​-19 ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 4,26,82,697 ಆಗಿದೆ. ದೇಶದಲ್ಲಿ ಕೋವಿಡ್​-19 ನಿಂದ ಗುಣಮುಖರಾಗುವವರ ಪ್ರಮಾಣ ಶೇ 98.64 ರಷ್ಟಿದೆ. ಪ್ರತಿದಿನದ ಪಾಸಿಟಿವಿಟಿ ರೇಟ್ ತುಸು ಏರಿಕೆಯಾಗಿ ಶೇ 2.47 ರಷ್ಟಿದೆ. ವಾರದ ಪಾಸಿಟಿವಿಟಿ ರೇಟ್ ಶೇ 2.41 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತೆ 5,19,903 ಕೋವಿಡ್-19 ಟೆಸ್ಟ್​ ಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ 85.69 ಕೋಟಿ ಕೋವಿಡ್​-19 ಟೆಸ್ಟ್ ಗಳನ್ನು ಮಾಡಲಾಗಿದೆ. ಶುಕ್ರವಾರದ ಮುಂಜಾನೆ ವೇಳೆಗೆ ದೇಶದಲ್ಲಿ ಒಟ್ಟಾರೆ 195.84 ಕೋಟಿ ಕೋವಿಡ್​-19 ಲಸಿಕಾ ಡೋಸ್​ಗಳನ್ನು ನೀಡಲಾಗಿದೆ.

ABOUT THE AUTHOR

...view details