ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಕೋವಿಡ್ ಕೇಸ್ ಇಳಿಕೆ: 11 ಸಾವಿರ ಹೊಸ ಪ್ರಕರಣ ಪತ್ತೆ - ಕೋವಿಡ್ ಪರೀಕ್ಷೆ

ಕಳೆದ 24 ಗಂಟೆಗಳ ಅವಧಿಯಲ್ಲಿ 27 ಸಾವು ಸಂಭವಿಸಿದ್ದು, ಒಟ್ಟಾರೆ ಸಾವಿನ ಸಂಖ್ಯೆ 5,25,047 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 96,700 ಕ್ಕೇರಿದೆ. ಇದು ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಶೇ 0.22 ಆಗಿದೆ.

India logs 11,793 Covid cases, 27 deaths
India logs 11,793 Covid cases, 27 deaths

By

Published : Jun 28, 2022, 12:13 PM IST

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 11,793 ಹೊಸ ಕೋವಿಡ್ ಕೇಸ್​ ಪತ್ತೆಯಾಗಿವೆ. ಇದಕ್ಕೂ ಹಿಂದಿನ ದಿನದಲ್ಲಿ 17,073 ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳಲ್ಲಿ ಸುಮಾರು 5 ಸಾವಿರ ಇಳಿಕೆ ಕಂಡು ಬಂದಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 27 ಸಾವು ಸಂಭವಿಸಿದ್ದು, ಒಟ್ಟಾರೆ ಸಾವಿನ ಸಂಖ್ಯೆ 5,25,047 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 96,700 ಕ್ಕೇರಿದೆ. ಇದು ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಶೇ 0.22 ಆಗಿದೆ. 9486 ರೋಗಿಗಳು ಕೋವಿಡ್​ನಿಂದ ಚೇತರಿಸಿಕೊಂಡಿದ್ದು, ಇವರ ಒಟ್ಟು ಸಂಖ್ಯೆ 4,27,97,092 ಆಗಿದೆ. ಇನ್ನು ಚೇತರಿಸಿಕೊಳ್ಳುವಿಕೆಯ ಪ್ರಮಾಣ ಶೇ 98.57 ಆಗಿದೆ. ಪ್ರತಿದಿನದ ಪಾಸಿಟಿವಿಟಿ ರೇಟ್ ಶೇ 2.49 ಗೆ ಕುಸಿದಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇ 3.36 ಆಗಿದೆ.

ಇದೇ ಅವಧಿಯಲ್ಲಿ ದೇಶಾದ್ಯಂತ 4,73,717 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಒಟ್ಟಾರೆ ಪರೀಕ್ಷೆಗಳ ಸಂಖ್ಯೆ 86.14 ಕೋಟಿಗೆ ತಲುಪಿದೆ.

ಇದನ್ನು ಓದಿ:ಲಸಿಕೆ ಪಡೆದ ಜನರಿಗೆ ಶೇ.40ರಷ್ಟು ಮರೆವಿನ ಕಾಯಿಲೆಯ ಬಾಧೆ ಕಡಿಮೆ

ABOUT THE AUTHOR

...view details