ನವದೆಹಲಿ: ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತವು 2.5 ಡಾಲರ್ ವೆಚ್ಚದಲ್ಲಿ 56 ಸಾರಿಗೆ ವಿಮಾನಗಳನ್ನು ಭಾರತೀಯ ವಾಯುಪಡೆಗೆ ತಯಾರಿಸುವ ಮೆಗಾ ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ವಾಯುಪಡೆಗೆ 56 ಸಾರಿಗೆ ವಿಮಾನ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಲಿರುವ ಭಾರತ - ಭಾರತೀಯ ವಾಯುಪಡೆ
ವಿಮಾನ ಖರೀದಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಒಪ್ಪಂದದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
![ವಾಯುಪಡೆಗೆ 56 ಸಾರಿಗೆ ವಿಮಾನ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಲಿರುವ ಭಾರತ iaf](https://etvbharatimages.akamaized.net/etvbharat/prod-images/768-512-10134325-270-10134325-1609897468118.jpg)
iaf
"ಈ ಯೋಜನೆಯನ್ನು ಏರೋಸ್ಪೇಸ್ ದೈತ್ಯ ಏರ್ಬಸ್ ಜೊತೆಗೆ ಭಾರತೀಯ ಘಟಕವು ಜಾರಿಗೆ ತರಲಿದ್ದು, ಇದು ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮದ ವಿಶಾಲ ಚೌಕಟ್ಟಿನಡಿಯಲ್ಲಿ ಕಾರ್ಯಗತಗೊಳ್ಳಲಿದೆ" ಎಂದು ಮೂಲಗಳು ತಿಳಿಸಿವೆ.
ವಿಮಾನದ ಖರೀದಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಒಪ್ಪಂದದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದು ನಮ್ಮ ರಕ್ಷಣಾ ಉದ್ಯಮಕ್ಕೆ ಉತ್ತೇಜನ ನೀಡಲಿದೆ.