ಕರ್ನಾಟಕ

karnataka

ETV Bharat / bharat

ಗ್ಲಾಸ್ಗೋ ಶೃಂಗಸಭೆ: ಎಲೆಕ್ಟ್ರಿಕ್ ವಾಹನದ ‘ಇ-ಅಮೃತ್’ ಪೋರ್ಟಲ್ ಆರಂಭಿಸಿದ ಭಾರತ - ಭಾರತ ಸಾರಿಗೆ ವಲಯ

ಯುನೈಟೆಡ್​ ಕಿಂಗ್​​ಡಮ್​ ಸರ್ಕಾರದ ಸಹಯೋಗದ ಜ್ಞಾನ ವಿನಿಮಯ ಕಾರ್ಯಕ್ರಮದಡಿ ಭಾರತ ಸರ್ಕಾರ ನೀತಿ ಆಯೋಗ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. EV-ಗಳ ಖರೀದಿ, ಅಳವಡಿಕೆ, ಹೂಡಿಕೆ ಅವಕಾಶ, ನೀತಿ ಮತ್ತು ಸಬ್ಸಿಡಿ ಯೋಜನೆ ಕುರಿತು ಮಾಹಿತಿ ಲಭ್ಯವಾಗಲಿದೆ.

india-launches-e-amrit-portal-on-evs-at-cop26
ಗ್ಲಾಸ್ಗೋ ಶೃಂಗಸಭೆಯಲ್ಲಿ ಎಲೆಕ್ಟ್ರಿಕ್ ವಾಹನದ ಇ-ಅಮೃತ್ ಪೋರ್ಟಲ್ ಆರಂಭಿಸಿದ ಭಾರತ

By

Published : Nov 11, 2021, 9:32 AM IST

ನವದೆಹಲಿ:ಇಂಗ್ಲೆಂಡ್​ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಪ್​​​-26 (COP-26) ಶೃಂಗಸಭೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಇ-ಅಮೃತ್ (E-Amrit) ವೆಬ್​ ಪೋರ್ಟ​ಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ನೀತಿ ಆಯೋಗ (NITI Aayog) ಹೊರಡಿಸಿರುವ ಹೇಳಿಕೆ ಪ್ರಕಾರ, ಇ-ಅಮೃತ್ (E-Amrit) ಪೋರ್ಟಲ್ ಎಲೆಕ್ಟ್ರಿಕ್ ವಾಹನಗಳ ಮಾಹಿತಿಯ ಒಂದು ಪ್ರಮುಖ ನಿಲ್ದಾಣವಾಗಿದೆ. EV-ಗಳ ಖರೀದಿ, ಅಳವಡಿಕೆ, ಹೂಡಿಕೆ ಅವಕಾಶ, ನೀತಿ ಮತ್ತು ಸಬ್ಸಿಡಿ ಯೋಜನೆ ಕುರಿತು ಮಾಹಿತಿ ಲಭ್ಯವಾಗಲಿದೆ.

ಯುಕೆ ಸರ್ಕಾರ (UK Government)ದ ಸಹಯೋಗದ ಜ್ಞಾನ ವಿನಿಮಯ ಕಾರ್ಯಕ್ರಮದಡಿ ನೀತಿ ಆಯೋಗ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಉಭಯ ದೇಶದ ಪ್ರಧಾನಮಂತ್ರಿಗಳು ಸಹಿ ಮಾಡಿರುವ ಯುಕೆ - ಇಂಡಿಯಾ ಜಂಟಿ ಮಾರ್ಗಸೂಚಿ (UK-India Joint Roadmap) 2030ರ ಭಾಗವಾಗಿ ಈ ಪೋರ್ಟಲ್ ಲೋಕಾರ್ಪಣೆಯಾಗಿದೆ ಎಂದು ತಿಳಿಸಿದೆ.

ಇ-ಅಮೃತ್ (E-Amrit) ಇವಿಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವ ಪ್ರಯೋಜನಗಳ ಬಗ್ಗೆ ಗ್ರಾಹಕರನ್ನು ಸೆಳೆಯುವುದು ಈ ಯೋಜನೆಯ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಸಾರಿಗೆ ವಲಯ (Transport Sector of India)ದ ಡಿಕಾರ್ಬೊನೈಸೇಶನ್ ಮತ್ತು ವಿದ್ಯುತ್ ಚಾಲಿತ ವಾಹನ ಅಳವಡಿಸಿಕೊಳ್ಳಲು (Adoption of electric mobility) ಅನೇಕ ಉಪಕ್ರಮಗಳನ್ನು ಜಾರಿ ಮಾಡುತ್ತಿದೆ.

ಇದನ್ನೂ ಓದಿ:ಖಾಸಗಿ ದರ್ಬಾರ್​ ನಡುವೆ ಸರ್ಕಾರಿ ಸೇವೆ ಪಡೆದ ಅಧಿಕಾರಿ.. ಸರ್ಕಾರಿ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮನೀಡಿದ ಡಿಸಿ ಪತ್ನಿ

ABOUT THE AUTHOR

...view details