ಕರ್ನಾಟಕ

karnataka

ETV Bharat / bharat

ಭಾರತದ ಪಿಎಸ್​ಎಲ್​ವಿ ಬಳಸಿ 29 ರಾಷ್ಟ್ರಗಳ 285 ಖಾಸಗಿ ಉಪಗ್ರಹ ಉಡಾವಣೆ: ಕೇಂದ್ರ ಸರ್ಕಾರ - ಭಾರತದಿಂದ ಖಾಸಗಿ ಉಪಗ್ರಹಗಳ ಉಡಾವಣೆ

ಉಡಾವಣೆಗೊಂಡ 285 ಖಾಸಗಿ ಉಪಗ್ರಹಗಳ ಪೈಕಿ 222 ಅಮೆರಿಕ ನಿರ್ಮಿತ ಉಪಗ್ರಹಗಳಾಗಿವೆ. ಬಳಿಕ ಲಿಥುವೇನಿಯಾ(7) ಎರಡನೇ ಸ್ಥಾನದಲ್ಲಿದೆ. ಅಲ್ಲದೇ, 2016 ರಿಂದ 2022ರವರೆಗೆ ದೇಶಿ ಮತ್ತು ವಿದೇಶಿ ನಿರ್ಮಿತ 329 ಉಪಗ್ರಹಗಳನ್ನು ಉಡಾಯಿಸಲಾಗಿದೆ.

Govt in RS
ಕೇಂದ್ರ ಸರ್ಕಾರ

By

Published : Feb 10, 2022, 7:01 PM IST

ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಈವರೆಗೂ 29 ದೇಶಗಳ 285 ಖಾಸಗಿ ಉಪಗ್ರಹಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಉಡ್ಡಯನ ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2016 ರಿಂದ 2022 ರವರೆಗೆ ವಾಣಿಜ್ಯ ಉದ್ದೇಶಕ್ಕಾಗಿ 29 ವಿವಿಧ ದೇಶಗಳ 285 ರಾಕೆಟ್​ಗಳನ್ನು ಸ್ವದೇಶಿ ನಿರ್ಮಿತ ಪಿಎಸ್​ಎಲ್​ವಿ ವಾಹಕ ಬಳಸಿ ಯಶಸ್ವಿಯಾಗಿ ನಭಕ್ಕೆ ಸೇರಿಸಲಾಗಿದೆ. ಇದರಲ್ಲಿ 2016-17 ರಲ್ಲಿ 122 ಉಪಗ್ರಹ, 2017-18 ರಲ್ಲಿ 57, 2018-19 ರಲ್ಲಿ 32 ರಾಕೆಟ್​​ಗಳು, 2019 ರಿಂದ 2021ರವರೆಗೆ 50 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಮುಟ್ಟಿಸಲಾಗಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್​ ರಾಜ್ಯಸಭೆಗೆ ತಿಳಿಸಿದರು.

ಉಡಾವಣೆಗೊಂಡ 285 ಖಾಸಗಿ ಉಪಗ್ರಹಗಳ ಪೈಕಿ 222 ಅಮೆರಿಕ ನಿರ್ಮಿತ ಉಪಗ್ರಹಗಳಾಗಿವೆ. ಬಳಿಕ ಲಿಥುವೇನಿಯಾ(7) ಎರಡನೇ ಸ್ಥಾನದಲ್ಲಿದೆ. ಅಲ್ಲದೇ, 2016 ರಿಂದ 2022ರವರೆಗೆ ದೇಶಿ ಮತ್ತು ವಿದೇಶಿ ನಿರ್ಮಿತ 329 ಉಪಗ್ರಹಗಳನ್ನು ಉಡಾಯಿಸಲಾಗಿದೆ. ಇದರಲ್ಲಿ 2016-17 ರಲ್ಲಿ ಅತಿ ಹೆಚ್ಚು ಅಂದರೆ 135 ರಾಕೆಟ್​ಗಳನ್ನು ಉಡಾಯಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದರಲ್ಲಿ ಭಾರತದ ಬಳಕೆಗೆಂದೇ 45 ಸ್ವದೇಶಿ ನಿರ್ಮಿತ ರಾಕೆಟ್​ಗಳನ್ನು ಪಿಎಸ್​ಎಲ್​ವಿ ನೌಕೆಯ ಮೂಲಕ ಉಡಾವಣೆ ಮಾಡಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್​ ರಾಜ್ಯಸಭೆಗೆ ತಿಳಿಸಿದರು.

ಓದಿ:ದೇಶದ ವಿರುದ್ಧ ಸುಳ್ಳು ಸುದ್ದಿ ಹರಡಿದ 60ಕ್ಕೂ ಅಧಿಕ ಸೋಷಿಯಲ್​ ಮೀಡಿಯಾ ಖಾತೆಗಳು ಬ್ಯಾನ್​- ಕೇಂದ್ರ ಸರ್ಕಾರ

ABOUT THE AUTHOR

...view details