ಅಯೋಧ್ಯೆ: ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣ ಕೆಲಸ ಶೇಕಡಾ 70 ಕ್ಕಿಂತಲೂ ಹೆಚ್ಚು ಪೂರ್ಣಗೊಂಡಿದೆ. 9 ನವೆಂಬರ್ 2019 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತಿದೆ. ಆದರೆ, ಅಯೋಧ್ಯೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭಿಸುವ ಕುರಿತು ಪ್ರಬಲ ಚರ್ಚೆ ನಡೆಯುತ್ತಿದೆ.
ದೇಶದ ಅತಿ ದೊಡ್ಡ ಮಸೀದಿ ನಿರ್ಮಾಣ:ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಿಸಲಿರುವ ಮಸೀದಿಗೆ 'ಮೊಹಮ್ಮದ್ ಬಿನ್ ಅಬ್ದುಲ್ಲಾ' ಎಂದು ಹೆಸರಿಡಲು ಉದ್ದೇಶಿಸಲಾಗಿದೆ. ಮುಂಬೈ ಬಿಜೆಪಿ ಮುಖಂಡ ಮತ್ತು ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರಾಫತ್ ಶೇಖ್ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಹೊಸ ಮಸೀದಿಯಲ್ಲಿ ವಿಶ್ವದ ಅತಿದೊಡ್ಡ ಕುರಾನ್ ಕೂಡ ಇರುತ್ತದೆ. ಇದು 21 ಅಡಿ ಎತ್ತರ ಮತ್ತು 36 ಅಡಿ ಅಗಲ ಇರಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ, ದೇಶದ ಎಲ್ಲ ಮಸೀದಿಗಳ ಸಂಘಟನೆಯಾದ ಆಲ್ ಇಂಡಿಯಾ ರಾಬ್ತಾ-ಎ-ಮಸ್ಜಿದ್ (AIRM) ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಮಸೀದಿಗೆ 'ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ' ಎಂದು ಹೆಸರಿಸಲು ನಿರ್ಧರಿಸಿದೆ. ಇದು ಭಾರತದ ಅತಿ ದೊಡ್ಡ ಮಸೀದಿಯಾಗಲಿದೆ ಮತ್ತು ಭಾರತದ ಅತಿ ದೊಡ್ಡ ಕುರಾನ್ ಕೂಡ ಇದರಲ್ಲಿ ಸ್ಥಾನ ಪಡೆಯಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.