ಕಂಗ್ರಾ (ಹಿಮಾಚಲ ಪ್ರದೇಶ):ಭಾರತ ತಮ್ಮ ಖಾಯಂ ನಿವಾಸವಾಗಿದ್ದು, ಉತ್ತಮ ಸ್ಥಳವಾಗಿದೆ. ಭಾರತವನ್ನೇ ವಾಸಿಸಲು ಆಯ್ಕೆ ಮಾಡುತ್ತೇನೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ.
ತವಾಂಗ್ ಘಟರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾಮಾನ್ಯವಾಗಿ ಹೇಳುವುದಾದರೆ ಹಲವು ವಿಷಯಗಳು ಅಭಿವೃದ್ಧಿ ಹೊಂದುತ್ತಿವೆ. ಯುರೋಪ್ ಮತ್ತು ಆಫ್ರಿಕಾ ಕೂಡ. ಚೀನಾ ಕೂಡ ತನ್ನ ನೀತಿಯನ್ನು ಸರಳಗೊಳಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಚೀನಾಕ್ಕೆ ಮರಳುವುದಿಲ್ಲ. ಭಾರತವೇ ನನ್ನ ಆದ್ಯತೆಯಾಗಿದೆ. ಇದು ಅತ್ಯುತ್ತಮ ಸ್ಥಳವಾಗಿದ್ದು, ಪಂಡಿತ್ ನೆಹರೂ ಆಯ್ಕೆಯಾಗಿದೆ. ಇದು ಖಾಯಂ ನಿವಾಸವಾಗಿದೆ ಎಂದಿದ್ದಾರೆ.
ಎರಡು ಮೂರು ದಿನಗಳ ಕಾಲ ಆರೋಗ್ಯ ತಪಾಸಣೆ ಹಿನ್ನೆಲೆ ದೆಹಲಿಯಲ್ಲಿ ಧರ್ಮಗುರು ದಲೈ ಲಾಮ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಅವರು ಬಿಹಾರದ ಬೋಧಗಯಾಕ್ಕೆ ತೆರಳಲಿದ್ದಾರೆ. ಈ ವೇಳೆ ಕಂಗ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾಮಾನ್ಯ ವೈದ್ಯಕೀಯ ತಪಾಸಣೆ ಇದೆ. ಇದರ ಹೊರತಾಗಿ ಯಾವುದೇ ದೈಹಿಕ ಸಮಸ್ಯೆ ಇಲ್ಲ. ಎಡಗೈನಲ್ಲಿ ಸ್ವಲ್ಪ ನೋವಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ತವಾಂಗ್ ಪ್ರದೇಶದಲ್ಲಿ ಡಿ. 9ರಂದು ಚೀನಾ ಮತ್ತು ಭಾರತದ ಸೇನೆಯೊಂದಿಗಿನ ಘರ್ಷಣೆ ಬೆನ್ನಲ್ಲೇ ಈ ಪ್ರಶ್ನೆ ಉದ್ಬವಿಸಿದೆ. ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತವಾಂಗ್ ಗಡಿಯಲ್ಲಿ ಚೀನಿ ಸೈನಿಕರು ಒಳನುಗ್ಗುವ ಯತ್ನ ನಡೆಸಿದ್ದರು. ಆಗ ನಮ್ಮ ಸೇನೆ ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಘರ್ಷಣೆಯಲ್ಲಿ ನಮ್ಮ ಯೋಧರ ಪ್ರಾಣಹಾನಿಯಾಗಿಲ್ಲ. ಎರಡೂ ಕಡೆ ಸೈನಿಕರಿಗೆ ಗಾಯವಾಗಿದ್ದು, ನಮ್ಮ ಯೋಧರು ಹುತಾತ್ಮರಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಚೀನಾ ಗಡಿ ಸಂಘರ್ಷ ಚರ್ಚೆಗೆ ಸಿಗದ ಅನುಮತಿ: ಪ್ರತಿಪಕ್ಷಗಳಿಂದ ಸಭಾತ್ಯಾಗ