ಹೈದರಾಬಾದ್:ಮುಂಬೈ ಭಾರತದ ಆರ್ಥಿಕ ರಾಜಧಾನಿ. ಅತಿದೊಡ್ಡ ವಾಣಿಜ್ಯ ನಗರಿ. ಬಾಲಿವುಡ್ ತಾರೆಗಳನ್ನು ಹೊಂದಿರುವ ಮಾಯಾ ಲೋಕದ ಸ್ವರ್ಗ. ನಗರದ ಐಕಾನ್ ಮೆರೈನ್ ಡ್ರೈವ್ ಉದ್ದಕ್ಕೂ ಸಿ- ಆಕಾರದಲ್ಲಿ ಮುತ್ತಿನ ಹಾರದಂತೆ ಕ್ವೀನ್ ನೆಕ್ಲೇಸ್ ನೋಡುಗರಿಗೆ ಆಹ್ಲಾದ ನೀಡುತ್ತೆ. ಶ್ರೀಮಂತಿಕೆ ಜೀವನದ ತೀರ ಜುಹು ಬೀಚ್. ಅದ್ಭುತವಾದ ವಾಸ್ತುಶಿಲ್ಪದ ದಿ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ. ಸಾಂಪ್ರದಾಯಿಕ ಹೆಗ್ಗುರುತು ದಿ ಗೇಟ್ ವೇ ಆಫ್ ಇಂಡಿಯಾ. ಇಂತಹ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಪಡೆದಿರುವ ಮುಂಬೈ ನಗರಕ್ಕೆ ಭೂಗತ ಅಪರಾಧ ಗೋಡೆ ಮೇಲಿನ ಬರಹದಷ್ಟೇ ಕಪ್ಪು ಚುಕ್ಕೆಯಾಗಿದೆ.
ಮೂರು ದಶಕಗಳ ಹಿಂದೆ ಮುಂಬೈ ಸಿಟಿ ಕುಖ್ಯಾತ ಭೂಗತ ಅಪರಾಧಿಗಳ ತೊಟ್ಟಿಲು ಎಂದು ಪ್ರಸಿದ್ಧಿ. ಎರಡು ದಶಕಗಳ ಹಿಂದೆ ಕೊಲೆ, ಅಪಹರಣ ಮತ್ತು ಸುಲಿಗೆಗಳಿಂದ ಆರ್ಥಿಕ ಬಂಡವಾಳ ನಗರವನ್ನು ನಡುಗಿಸಿದವರಲ್ಲಿ ಓರ್ವ ಅರುಣ್ ಗಾವ್ಲಿ ಒಬ್ಬರು. ಈ ನಂತರ ಆತ ಭಾರತೀಯ ಪ್ರಜಾಪ್ರಭುತ್ವದ ಬೋಧಿಸತ್ವ ಮರದ ಕೆಳಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ರಾಜಕೀಯ ಪ್ರವೇಶಿಸಿದರು.
ಆತ ತನ್ನ ಕ್ರಿಮಿನಲ್ ಸಾಮ್ರಾಜ್ಯ ಎಷ್ಟರ ಮಟ್ಟಿಗೆ ವಿಸ್ತರಿಸಿದ್ದನೆಂದರೇ, ಹಣ ಸುಲಿಗೆಗೆ ತನ್ನ ಹೆಸರು ಬಳಸಿಕೊಂಡವರಿಗೆ ಬೆದರಿಕೆ ಹಾಕಿ ಧ್ವನಿ ಎತ್ತದಂತೆ ಸೈಡ್ಲೈನ್ಗೆ ತಳ್ಳಿಬಿಡುತ್ತಿದ್ದ. ಪೊಲೀಸರ ಕ್ರಾಸ್‌ಫೈರ್‌ನಲ್ಲಿ ತಾನು ಯಾವುದೇ ಸಮಯದಲ್ಲಿ ನೆಲ್ಲಕ್ಕೆ ಉರುಳಬಹುದು ಎಂಬುದು ಕೂಡ ಗಾವ್ಲಿಗೆ ಚೆನ್ನಾಗಿ ತಿಳಿದಿತ್ತು. 1997ರಲ್ಲಿ ಆತ 'ಅಖಿಲ್ ಭಾರತೀಯ ಸೇನಾ' ಎಂಬ ಪಕ್ಷ ಕಟ್ಟಿದೆ. ರಾಜಕೀಯ ಚದುರಂಗದಾಟ ಯಶಸ್ವಿಯಾಗಿ ಆಡಿದ. ಆತನ ವಿರುದ್ಧ ಇದ್ದ ಮೂರು ಡಜನ್ಗಿಂತ ಅಧಿಕ ಕ್ರಿಮಿನಲ್ ಪ್ರಕರಣಗಳ ನಡುವೆಯೂ ಪೊಲೀಸರನ್ನೇ ಅಂಗರಕ್ಷಕರನ್ನಾಗಿ ಮಾಡಿಕೊಂಡ. ‘ಡಾನ್’ನಿಂದ ಖ್ಯಾತ 'ರಾಜಕಾರಣಿ'ಯಾಗಿ ಪರಿವರ್ತಿಸಿಕೊಂಡಾಗ ಎಲ್ಲಾ ವಿಪತ್ತು ಮತ್ತು ಅಪಾಯಗಳಿಂದ ಮುಕ್ತನಾದ.
ತರುವಾಯ ರಾಜಕಾರಣಿಗಳು ತಮ್ಮ ಹಸ್ತಗಳನ್ನು ಕೊಳಕುಗೊಳಿಸದೇ ತಮ್ಮ ವೃತ್ತಿಪರ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಿದರು. ಉತ್ತಮವಾಗಿ ತಮ್ಮ ಡಾನ್ ನಂತರದ ರಾಜಕೀಯ ಜೀವನ ರೂಪಿಸಿಕೊಂಡರು.
ವಿಶ್ವದ ಎಂಟನೇ ಅತಿದೊಡ್ಡ ಶ್ರೀಮಂತ ನಗರ ಬ್ರಿಹನ್ ಮುಂಬೈಯಲ್ಲಿ, ರಾಜ್ಯದ ಗೃಹ ಸಚಿವರು ಬಂಡವಾಳಶಾಹಿ ದಾದಗಿರಿನಲ್ಲಿ ಆತ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನತ್ತಾಧಿಕಾರಿ ಆರೋಪಿಸಿದ್ದಾರೆ. ಮುಖೇಶ್ ಅಂಬಾನಿ ಅವರ ನಿವಾಸದ ಮುಂದೆ ಸ್ಫೋಟಕ ತುಂಬಿದ ವಾಹನ ನಿಲ್ಲಿಸುವುದರೊಂದಿಗೆ ಶರುವಾದ ಅಪರಾಧ ಕಥೆಯು ಮಹಾರಾಷ್ಟ್ರ ರಾಜ್ಯದಲ್ಲಿ ಅಪರಾಧ ರಾಜಕಾರಣದ ಕುತೂಹಲಕಾರಿ ಸ್ಟೋರಿಗಳನ್ನು ತೆರೆದಿಟ್ಟಿದೆ. ಕೊನೆಗೆ ಗೃಹ ಸಚಿವರು ತಮ್ಮ ಸ್ಥಾನವನ್ನೇ ಬಿಟ್ಟುಕೊಡಬೇಕಾಯಿತು.
ಮುಖೇಶ್ ಅಂಬಾನಿಯ ನಿವಾಸದ ಹೊರಗೆ ನಿಲ್ಲಿಸಿದ್ದ ಸ್ಫೋಟಕ ಹೊಂದಿದ್ದ ವಾಹನದ ಮಾಲೀಕ ಮನ್ಸುಖ್ ಹಿರೆನ್ ಹತ್ಯೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಆರು ವಾರಗಳಿಂದ ಈ ಪ್ರಕರಣದ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿರುವ ಎನ್‌ಐಎ, ಮುಂಬೈ ಪೊಲೀಸ್ ಸಹಾಯಕ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಬಂಧಿಸಿದೆ. ಪಿತೂರಿಯ ಹಿಂದಿನ ಕರಾಳ ಅಂಶಗಳನ್ನು ಎಳೆ-ಎಳೆಯಾಗಿ ಹೊರಬರುತ್ತಿವೆ.
ಇಂತಹ ಘೋರ ಅಪರಾಧವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು ವರ್ಗಾಯಿಸಿದೆ. ವರ್ಗಾವಣೆ ಆದೇಶಗಳನ್ನು ಸ್ವೀಕರಿಸಿದ ನಂತರ ಸಿಂಗ್ ಮುಖ್ಯಮಂತ್ರಿಗೆ ಬರೆದ ಪತ್ರವು ಒಂದು ಸಂವೇದನೆಯನ್ನು ದೇಶಾದ್ಯಂತ ಸೃಷ್ಟಿಸಿದೆ. ಗೃಹ ಸಚಿವ ಅನಿಲ್ ದೇಶಮುಖ್ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಬಲವಂತವಾಗಿ ಮಾಸಿಕ ಹಣ ಸಂಗ್ರಹದ ಗುರಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅನಿಲ್ ದೇಶಮುಖ್ ಮತ್ತು ಇನ್ನೊಬ್ಬ ಸಚಿವ ಅನಿಲ್ ಪರಬ್ ವಿರುದ್ಧ ಈಗ ಎನ್ಐಎ ಬಂಧನದಲ್ಲಿ ಇರುವ ಸಚಿನ್ ವಾಜೆ ಅವರ ಮೇಲಿನ ಸುಲಿಗೆ ಆರೋಪಗಳು ರಾಜಕೀಯ ಪ್ರಕ್ಷುಬ್ಧತೆ ಸೃಷ್ಟಿಸಿದೆ. ಮುಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆಗೆ ಬರುವ ಒಂದು ದಿನ ಮೊದಲು, ಉದ್ಧವ್ ಠಾಕ್ರೆ ಸರ್ಕಾರ ಇಡೀ ವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಗೃಹ ಸಚಿವರ ವಿರುದ್ಧದ ಆರೋಪಗಳ ಗಂಭೀರತೆಯನ್ನು ಗಮನದಲ್ಲಿ ಇರಿಸಿಕೊಂಡು, ಸತ್ಯಗಳನ್ನು ಬಹಿರಂಗಪಡಿಸಲು ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯತೆಯ ಬಗ್ಗೆ ಮುಂಬೈ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಗೃಹ ಸಚಿವರು ರಾಜೀನಾಮೆ ನೀಡಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಹೈಕೋರ್ಟ್ ಆದೇಶಗಳನ್ನು ತಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದ್ದರಿಂದ, ಸಿಬಿಐ ಹದಿನೈದು ದಿನಗಳಲ್ಲಿ ಪ್ರಾಥಮಿಕ ವಿಚಾರಣೆ ಮುಕ್ತಾಯಗೊಳಿಸಲು ಮುಂದಾಗಿದೆ. ಮುಂಬೈನ ಸುಮಾರು 1,650 ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ತಲಾ 3-3.50 ಲಕ್ಷ ರೂ. ಸಂಗ್ರಹಿಸಲು ಗೃಹ ಸಚಿವರು ಆದೇಶಿಸಿದ್ದರು ಎಂಬುದು ಆರೋಪಗಳ ಒಟ್ಟಾರೆ ಸಾರಾಂಶ.
ಪೊಲೀಸರು ಸಂಘಟಿತ ಅಪರಾಧಿಗಳ ಮೊತ್ತ ಎಂದು ಸುಪ್ರೀಂಕೋರ್ಟ್ ಹೇಳಿದೆ. ತನಿಖೆಯಿಂದ ಸೃಷ್ಟಿಯಾದ ನಡುಕ ಅನಿಲ್ ದೇಶಮುಖ್ ಅವರಷ್ಟಕ್ಕೆ ನಿಲ್ಲುವುದಿಲ್ಲ, ಕೆಲವು ಸ್ಥಾನಗಳತ್ತ ಸಾಗಬಹುದು. ಬಿಜೆಪಿ ಮೇಲಧಿಕಾರಿಗಳ ಭವಿಷ್ಯವಾಣಿಯು ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಭೂಮಿಕೆಗೆ ಸಾಕ್ಷಿ ಆಗಬಹುದು.
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮ್ಮ ಪ್ರಧಾನ ಮಂತ್ರಿ ಎರ್ನಾ ಸೋಲ್ಬರ್ಗ್ ಅವರಿಗೆ 2,352 ಡಾಲರ್ ದಂಡ ವಿಧಿಸಿದ ನಾರ್ವೆ ಪೊಲೀಸರ ಪಕ್ಷಪಾತವಿಲ್ಲದ ಕರ್ತವ್ಯ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರಶಂಸಿಸುವುದು ನಮಗೆ ಕಷ್ಟ. ದೇಶದಲ್ಲಿನ ಎಲ್ಲ ರೀತಿಯ ಭ್ರಷ್ಟಾಚಾರಕ್ಕೆ ಮೂಲ ಕಾರಣ ರಾಜಕೀಯ ಭ್ರಷ್ಟಾಚಾರ. ರಾಜಕೀಯಕ್ಕೆ ಮುಕ್ತ ಕೈಗಳಿಂದ ಅಪರಾಧಿಗಳನ್ನು ಆಹ್ವಾನಿಸುವ ರಾಜಕೀಯ ಪಕ್ಷಗಳಿಗೆ ಧನ್ಯವಾದ ಹೇಳಲೇಬೇಕು.
ಇತ್ತೀಚಿನವರೆಗೆ ಮಹಾರಾಷ್ಟ್ರ ಕ್ಯಾಬಿನೆಟ್‌ನಲ್ಲಿ 42 ಮಂತ್ರಿಗಳಿದ್ದು, ಅವರಲ್ಲಿ 27 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಈ ಪೈಕಿ 18 ಮಂದಿ ಭೀಕರ ಅಪರಾಧದ ಆರೋಪ ಎದುರಿಸುತ್ತಿದ್ದಾರೆ.
ಟಿಕ್ - ಟಾಕ್ ಸ್ಟಾರ್ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಸಚಿವರು ಸ್ಥಾನ ಕಳೆದುಕೊಂಡರೆ, ಇಂತಹ ಘಟನೆಗಳಿಂದ ಸಚಿವರು ಸುಲಿಗೆಗೆ ಪ್ರಚೋದನೆ ನೀಡಿರುವುದು ಆಶ್ಚರ್ಯವೇ? ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿರುವವರು ಭಾರತವನ್ನು ಹೊರತುಪಡಿಸಿ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಾಗಿ ಅಧಿಕಾರದ ಚಕ್ರ ತಿರುಗಿಸುವವರು ಬೇರೆ ಎಲ್ಲಿಯಾದರೂ ಇರಲು ಸಾಧ್ಯವೇ?
ನ್ಯಾಯಾಲಯದ ಸಹಾಯಕ (ಅಮಿಕಸ್ ಕ್ಯೂರಿ) ವಿಜಯ್ ಹನ್ಸಾರಿಯಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ಗೆ ವರದಿಯೊಂದನ್ನು ಸಲ್ಲಿಸಿದ್ದರು. 22 ರಾಜ್ಯಗಳ 2,556 ಶಾಸಕರು ಮತ್ತು ಸಂಸದರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಮಾಜಿ ಸದಸ್ಯರನ್ನು ಗಣನೆಗೆ ತೆಗೆದುಕೊಂಡರೆ, ಅವರ ಸಂಖ್ಯೆ 4,442 ತಲುಪುತ್ತದೆ. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಈ ಪಾಪಿಗಳನ್ನು ವ್ಯವಸ್ಥೆಯಿಂದ ಶುದ್ಧೀಕರಿಸುವ ಉತ್ತಮ ಉದ್ದೇಶಗಳ ಹೊರತಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಯಾವುದೇ ಕುರುಹು ಇಲ್ಲ!
ಹಿಂದಿನ ಕಾಲದ ನಾಯಕರು ತಮ್ಮ ವೈಕಯಕ್ತಿಕ ಜೀವನದ ಎಲ್ಲವನ್ನೂ ತ್ಯಜಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದಿನ ನಾಯಕರು ಅಂತಹ ಎಲ್ಲಾ ಮೌಲ್ಯಗಳನ್ನು ತ್ಯಾಗ ಮಾಡುತ್ತಿದ್ದಾರೆ. ಎಲ್ಲಾ ಅನೈತಿಕ ಮತ್ತು ಕಾನೂನುಬಾಹಿರ ವಿಧಾನಗಳಿಂದ ಸಂಪತ್ತನ್ನು ಒಟ್ಟುಗೂಡಿಸುವಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ! ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಆರು ಸ್ಥಾನಗಳನ್ನು ಕಳೆದುಕೊಂಡಿರುವ ಭಾರತ ತನ್ನ ಎಲ್ಲ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ! ರಾಜಕೀಯ ನಾಯಕರ ಸ್ವಾರ್ಥಿ ಹಿತಾಸಕ್ತಿಗಳನ್ನು ಪೂರೈಸಲು ಪೊಲೀಸ್ ಸಿಬ್ಬಂದಿಯನ್ನು ಅಕ್ರಮ ಹಣ ಸಂಗ್ರಹಿಸುವವರನ್ನಾಗಿ ಮಾಡುವ ತಂತ್ರ ಮಹಾರಾಷ್ಟ್ರದಲ್ಲಿ ವಿಫಲವಾಗಿ ನಡೆಯುತ್ತಿದೆ. ಇಂತಹದ್ದು ಬೇರೆಲ್ಲಿಯೂ ಇಲ್ಲ ಎಂದು ನಾವು ವಿಶ್ವಾಸದಿಂದ ಹೇಳಲು ಸಾಧ್ಯವಿಲ್ಲ!
ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಅವರು ಹೇಳಿದಂತೆ, 'ಅಧಿಕಾರವು ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿದೆ. ವಿಷದಿಂದ ಹುಟ್ಟಿದ ಕ್ರಿಮಿಯ ಆಹಾರವು ವಿಷ ಮಾತ್ರ. ಇದರಿಂದ ಇಡೀ ವ್ಯವಸ್ಥೆಯು ಭ್ರಷ್ಟಾಚಾರದಿಂದ ವಿಷಪೂರಿತವಾಗುತ್ತಿದೆ. ಈಗಿನ ಸನ್ನಿವೇಶದಲ್ಲಿ, ನಮ್ಮ ಪ್ರಜಾಪ್ರಭುತ್ವ ವರ್ಣರಂಜಿತವಾಗಿ ಹೊಳೆಯುತ್ತಿದೆ. ಹೊಳೆಯುವ ಹಣ್ಣನ್ನು ಕೀಟಗಳು ಮತ್ತು ಹುಳುಗಳು ನುಂಗುತ್ತಿವೆ. ಇವು ಒಳಗಿನಿಂದ ಟೊಳ್ಳಾಗಿಸುತ್ತಿವೆ.