ಕರ್ನಾಟಕ

karnataka

ಭಾರತವು ಮಾನವೀಯತೆಯ ಹಿತಾಸಕ್ತಿಗಳನ್ನು ರಕ್ಷಿಸುವ ಕಲ್ಪನೆಯಾಗಿದೆ: ಪ್ರಧಾನಿ ಮೋದಿ

By

Published : Dec 19, 2021, 7:24 PM IST

ಭಾರತವು ಆತ್ಮಕ್ಕಿಂತ ಹೆಚ್ಚಿನದಾಗಿದೆ ಮತ್ತು ಅತ್ಯುನ್ನತವಾದ ಮನೋಭಾವವನ್ನು ಹೊಂದಿದೆ. ಅಲ್ಲಿ 'ರಾಷ್ಟ್ರಮೊದಲು' ಎಂಬ ಒಂದೇ ಮಂತ್ರವಿದೆ, ಅಲ್ಲಿ 'ಏಕ ಭಾರತ, ಶ್ರೇಷ್ಠ ಭಾರತ' ಎಂಬ ಒಂದೇ ಸಂಕಲ್ಪವಿದೆ ಎಂದು ಪ್ರಧಾನಿ ಮೋದಿ ಹೇಳಿದರು..

PM Modi
ಪ್ರಧಾನಿ ಮೋದಿ

ಪಣಜಿ (ಗೋವಾ): ಗೋವಾ ವಿಮೋಚನಾ ದಿನಾಚರಣೆಯ ಅಂಗವಾಗಿ ಇಂದು ಪಣಜಿಯ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಭಾರತವು ಒಂದು ಕಲ್ಪನೆ. ಅದು ಮಾನವೀಯತೆಯ ಹಿತಾಸಕ್ತಿಗಳನ್ನು ರಕ್ಷಿಸುವ ಕಲ್ಪನೆಯಾಗಿದೆ. ಭಾರತವು ಆತ್ಮಕ್ಕಿಂತ ಹೆಚ್ಚಿನದಾಗಿದೆ ಮತ್ತು ಅತ್ಯುನ್ನತವಾದ ಮನೋಭಾವವನ್ನು ಹೊಂದಿದೆ. ಅಲ್ಲಿ 'ರಾಷ್ಟ್ರ ಮೊದಲು' ಎಂಬ ಒಂದೇ ಮಂತ್ರವಿದೆ, ಅಲ್ಲಿ 'ಏಕ ಭಾರತ, ಶ್ರೇಷ್ಠ ಭಾರತ' ಎಂಬ ಒಂದೇ ಸಂಕಲ್ಪವಿದೆ ಎಂದು ಹೇಳಿದರು.

ಆಪರೇಷನ್ ವಿಜಯ್‌ನ ಹೋರಾಟಗಾರರನ್ನ ಸನ್ಮಾನಿಸಿದ ಮೋದಿ

ಗೋವಾದ ಭೂಮಿ, ಗೋವಾದ ಗಾಳಿ, ಗೋವಾದ ಸಮುದ್ರವು ಪ್ರಕೃತಿಯ ಅದ್ಭುತ ಕೊಡುಗೆಯಿಂದ ಆಶೀರ್ವದಿಸಲ್ಪಟ್ಟಿದೆ ಮತ್ತು ಇಂದು ಗೋವಾದ ಜನರ ಈ ಉತ್ಸಾಹವು ವಿಮೋಚನೆಯ ಹೆಮ್ಮೆಯನ್ನು ಹೆಚ್ಚಿಸುತ್ತಿದೆ.

ಆಜಾದ್ ಮೈದಾನದಲ್ಲಿರುವ ಶಹೀದ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸೌಭಾಗ್ಯ ನನಗೂ ಸಿಕ್ಕಿತು. ನೌಕಾ​ ಪರೇಡ್​ ವೀಕ್ಷಿಸಿದೆ. ಆಪರೇಷನ್ ವಿಜಯ್‌ನ ಯೋಧರನ್ನು ಸನ್ಮಾನಿಸುವ ಅವಕಾಶ ಸಿಕ್ಕಿತು ಎಂದು ಪ್ರಧಾನಿ ಹೇಳಿದರು.

ನೌಕಾ​ ಪರೇಡ್​ ವೀಕ್ಷಿಸಿದ ಪ್ರಧಾನಿ

ದೇಶದ ಇತರ ಪ್ರಮುಖ ಭಾಗಗಳು ಮೊಘಲರ ಆಳ್ವಿಕೆಯಲ್ಲಿದ್ದ ಸಮಯದಲ್ಲಿ ಗೋವಾ ಪೋರ್ಚುಗಲ್ ಅಡಿಯಲ್ಲಿ ಇತ್ತು. ಆದರೆ, ಸಮಯ ಮತ್ತು ಅಧಿಕಾರದ ಕ್ರಾಂತಿಯ ನಡುವಿನ ಶತಮಾನಗಳ ಅಂತರದ ನಂತರವೂ ಗೋವಾ ತನ್ನ ಭಾರತೀಯತೆಯನ್ನು ಮರೆತಿಲ್ಲ ಅಥವಾ ಭಾರತವು ತನ್ನ ಗೋವಾವನ್ನು ಮರೆತಿಲ್ಲ. ಇದು ಕೇವಲ ಗಟ್ಟಿಯಾಗಿ ಬೆಳೆದ ಸಂಬಂಧವಾಗಿದೆ ಎಂದು ಮೋದಿ ತಿಳಿಸಿದರು.

ABOUT THE AUTHOR

...view details