ಕರ್ನಾಟಕ

karnataka

ETV Bharat / bharat

ಭಾರತ ಕೊರೊನಾ ವೈರಸ್ ಹಿಡಿತದಲ್ಲಿ ಮಾತ್ರವಲ್ಲ, 'ಐಡಿಯಾಲಜಿ ವೈರಸ್' ಹಿಡಿತವನ್ನೂ ಹೊಂದಿದೆ: ಕಾಂಗ್ರೆಸ್​ ಆರೋಪ - ಐಡಿಯಾಲಜಿ ವೈರಸ್

ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ರಾಷ್ಟ್ರವು ಕೇವಲ ಕೊರೊನಾ ವೈರಸ್​ ಹಿಡಿತದಲ್ಲಿಲ್ಲ 'ಐಡಿಯಾಲಜಿ ವೈರಸ್' ಕೂಡ ಆಗಿದೆ ಎಂದು ಆರೋಪಿಸಿದ್ದಾರೆ.

congress leader
congress leader

By

Published : Apr 30, 2021, 8:55 PM IST

ನವದೆಹಲಿ: ಕೋವಿಡ್ -19 ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವುದರಿಂದ ದೇಶದಲ್ಲಿ ವ್ಯಾಕ್ಸಿನೇಷನ್ ಚಾಲನೆಯನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಇಬ್ಬರು ಹಿರಿಯ ನಾಯಕರಾದ ಸ್ಯಾಮ್ ಪಿತ್ರೋಡಾ ಮತ್ತು ಜೈರಾಮ್ ರಮೇಶ್ ಶುಕ್ರವಾರ ಚರ್ಚೆ ನಡೆಸಿದರು.

ದೇಶದ ಸದ್ಯದ ಕೊರೊನಾ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು, ಭಾರತ ಕೊರೊನಾ ವೈರಸ್ ಹಿಡಿತದಲ್ಲಿ ಮಾತ್ರವಲ್ಲ, ಸರ್ಕಾರವು ನಿರ್ಲಕ್ಷ್ಯ ತೋರುತ್ತಿರುವುದರಿಂದ 'ಐಡಿಯಾಲಜಿ ವೈರಸ್' ಹಿಡಿತದಲ್ಲಿದೆ ಎಂದು ಆರೋಪಿಸಿದರು.

ಚರ್ಚೆಯ ವೇಳೆ ರಮೇಶ್, "ಆಗಸ್ಟ್ 2021 ರ ವೇಳೆಗೆ 300 ಮಿಲಿಯನ್ ಭಾರತೀಯರಿಗೆ ಲಸಿಕೆ ನೀಡಲಾಗುವುದು ಎಂದು ನಾವು ಪ್ರಧಾನ ಮಂತ್ರಿಯವರು ನಿಗದಿಪಡಿಸಿದ ಗುರಿಯನ್ನು ನಂಬಿದ್ದೇವೆ. ಆದರೆ ಈವರೆಗೂ ಈ ಗುರಿಯ ಶೇಕಡಾ 10 ರಷ್ಟು ಮಾತ್ರ ಸಾಧಿಸಲಾಗಿದೆ. ಇದು ಮಾರುಕಟ್ಟೆ ಆರ್ಥಿಕತೆ ಬಗ್ಗೆ ಯೋಚಿಸುವ ಸಮಯವಲ್ಲ,. ಇದು ರಾಷ್ಟ್ರೀಯ ತುರ್ತುಸ್ಥಿತಿ. ಎಂದರು.

"ನಾವು ಕೇವಲ ಕೋವಿಡ್ ವೈರಸ್ ಹಿಡಿತದಲ್ಲಿಲ್ಲ. ನಾವು ಸಾರ್ವಜನಿಕ ವಲಯವನ್ನು ಅನುಮಾನಾಸ್ಪದವಾಗಿ ನೋಡುವ ಮತ್ತು ಇದು ಮಾರುಕಟ್ಟೆ ಅರ್ಥವ್ಯವಸ್ಥೆ ಸಮಯ ಎಂದು ಭಾವಿಸುವ ಐಡಿಯಾಲಜಿ ವೈರಸ್‌ನ ಹಿಡಿತದಲ್ಲಿದ್ದೇವೆ ಎಂದು ಅವರು ಆರೋಪಿಸಿದರು.

ಸಮಸ್ಯೆ ಏನೆಂದು ನೀವು ಗುರುತಿಸದ ಹೊರತು ನೀವು ಪರಿಹಾರದ ಹಾದಿಯಲ್ಲಿರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​​​ ನಾಯಕರು ಪ್ರತಿಪಾದಿಸಿದ್ದಾರೆ. ಈ ಮಧ್ಯೆ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ ಸ್ಯಾಮ್ ಪಿತ್ರೊಡಾ, "ನಾವು ಜನರ ಧ್ವನಿ ಕೇಳಬೇಕು, ನಾವು ಇತರರನ್ನು ಆಲೋಚನೆಗಳು ಮತ್ತು ಒಳ ಹರಿವುಗಳಿಗಾಗಿ ಆಹ್ವಾನಿಸಬೇಕು ಮತ್ತು ವೈಜ್ಞಾನಿಕ ಮನೋಭಾವವನ್ನು ಹೊಂದಿರಬೇಕು" ಎಂದು ಹೇಳಿದರು.

ಜೈರಾಮ್ ರಮೇಶ್ ಮಾತನಾಡಿ, ವ್ಯಾಕ್ಸಿನ್​ ವಿಚಾರದ ಬಗ್ಗೆ ದೇಶದಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಗಳು, ಸಂಸದರು, ಶಾಸಕರು, ಸ್ಥಳೀಯ ಮಾಧ್ಯಮಗಳು ಸೇರಿದಂತೆ ಎಲ್ಲ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿ ಪೋಲಿಯೊ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಪ್ರಸ್ತಾಪಿಸಿದ್ರು.

ಇದೇ ವೇಳೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ, ನೀತಿ ಆಯೋಗದ ಸಲಹೆಗಾರ ವಿ.ಕೆ. ಪಾಲ್ ಸೇರಿದಂತೆ ತಜ್ಞರ ಗುಂಪನ್ನು ಸರ್ಕಾರ ಒಟ್ಟುಗೂಡಿಸುವ ಅಗತ್ಯವಿದೆ ಮತ್ತು ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಅವರು ಸಲಹೆ ನೀಡಿದರು. ಹಾಗೆಯೇ ಹೆಚ್ಚೆಚ್ಚು ವ್ಯಾಕ್ಸಿನ್​ ಉತ್ಪಾದನೆಯಾಗಬೇಕು ಎಂದು ಕಾಂಗ್ರೆಸ್​ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ABOUT THE AUTHOR

...view details