ನವದೆಹಲಿ:ಈ ವರ್ಷದ ಜನವರಿಯಿಂದ, ಭಾರತದಿಂದ ಶ್ರೀಲಂಕಾಕ್ಕೆ ನೀಡಿದ ನೆರವು 2.5 ಶತಕೋಟಿ ಮೀರಿದೆ ಎಂದು ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ತಿಳಿಸಿದರು.ದ್ವೀಪರಾಷ್ಟ್ರದ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಸಹಾಯ ಮಾಡಲು ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು.
ಫೆಬ್ರವರಿಯಿಂದ ಒಟ್ಟು 150,000 ಟನ್‌ಗಳಷ್ಟು ಜೆಟ್ ಏವಿಯೇಷನ್ ಇಂಧನ, ಡೀಸೆಲ್ ಮತ್ತು ಪೆಟ್ರೋಲ್ ವಿತರಿಸಲಾಗಿದೆ. ಅಲ್ಲದೇ ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳಿಗೆ $1 ಬಿಲಿಯನ್ ಸಾಲ ನೀಡಲು ಸಹಿ ಹಾಕಲಾಗಿದೆ. ಆರ್‌ಬಿಐ USD 400 ಮಿಲಿಯನ್ ಕರೆನ್ಸಿ ವಿನಿಮಯವನ್ನು ವಿಸ್ತರಿಸಿದೆ ಎಂದರು ತಿಳಿಸಿದರು.