ನವದೆಹಲಿ :ಇಂದು ರಾಷ್ಟ್ರೀಯ ಮತದಾರರ ದಿನ. ಪ್ರತಿ ವರ್ಷ ಹೆಚ್ಚಿನ ಯುವ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಜನವರಿ 25ರಂದು ರಾಷ್ಟ್ರೀಯ ವೋಟರ್ಸ್ ಡೇ ಆಚರಣೆ ಮಾಡಲಾಗ್ತದೆ.
ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ಮಾತನಾಡಿದರು.
ಈ ವೇಳೆ ದೇಶದಲ್ಲಿ 95.3 ಕೋಟಿಗೂ ಅಧಿಕ ಮತದಾರರಿದ್ದು, ಇದರಲ್ಲಿ 49 ಕೋಟಿ ಪುರುಷರು ಹಾಗೂ 46 ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದು ತಿಳಿಸಿದರು. ಜೊತೆಗೆ ದೇಶದಲ್ಲಿ 1.92 ಕೋಟಿ ಹಿರಿಯ ನಾಗರಿಕ ವೋಟರ್ಸ್ ಇರುವ ಮಾಹಿತಿ ಹಂಚಿಕೊಂಡರು.
ಈಗಾಗಲೇ ಘೋಷಣೆಯಾಗಿರುವ ಪಂಚರಾಜ್ಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಕೋವಿಡ್ ಸುರಕ್ಷಿತ ಚುನಾವಣೆ ನಡೆಸಲು ನಾವು ಸಿದ್ಧರಾಗಿದ್ದು, ಇದಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆ ಈಗಾಗಲೇ ಬಹುತೇಕ ಪೂರ್ಣಗೊಂಡಿವೆ ಎಂದರು.