ಲಡಾಖ್ : ಚೀನಾ ಸೇನೆಯ ಸೈನಿಕನೊಬ್ಬ ದಾರಿ ತಪ್ಪಿ ಭಾರತ ಗಡಿ ರೇಖೆ ಬಳಿ ಬಂದಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸೇನೆ, ಇಂದು ಅವರನ್ನು ಚೀನಾಕ್ಕೆ ಹಸ್ತಾಂತರಿಸಿದೆ.
ದಾರಿ ತಪ್ಪಿ ಬಂದಿದ್ದ ಪಿಎಲ್‌ಎ ಸೈನಿಕನನ್ನು ಚೀನಾಕ್ಕೆ ಹಿಂತಿರುಗಿಸಿದ ಭಾರತ - ಸೈನಿಕನನ್ನು ಚೀನಾಕ್ಕೆ ಹಿಂತಿರುಗಿಸಿದ ಭಾರತ
ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ( ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ದಾರಿ ತಪ್ಪ ಭಾರತೀಯ ಗಡಿಯೊಳಗೆ ನುಸಿಳಿದ್ದ ಚೀನಾ ಸೈನಿಕನನ್ನು ಭಾರತೀಯ ಸೇನೆ ಬಂಧಿಸಿತ್ತು. ಇದೀಗ ಆ ಸೈನಿಕನನ್ನು ಭಾರತೀಯ ಸೇನೆ ಚೀನಾಕ್ಕೆ ಹಿಂತಿರುಗಿಸಿದೆ.

India Hands Back PLA Soldiers To China
ಜ.08ರಂದು ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ನ ಬಳಿ ಚೀನಾ ಸೇನೆಯ ಸೈನಿಕನೊಬ್ಬ ಗಡಿ ರೇಖೆಯನ್ನು ದಾಟಿ ಬಂದಿದ್ದನು. ಈತನನ್ನು ಭಾರತೀಯ ಸೈನಿಕರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು. ವಿಚಾರಣೆ ಬಳಿಕ ಇಂದು ಸೈನಿಕಕನ್ನು ಚೀನಾ ಸೇನೆಗೆ ಹಿಂತಿರುಗಿಸಲಾಗಿದೆ.