ನವದೆಹಲಿ:ಭಾರತ ಮತ್ತು ಫ್ರಾನ್ಸ್ ಸಹಕಾರ ಸಂಬಂಧ ಅಭಿವೃದ್ಧಿಗೆ ಉಭಯ ರಾಷ್ಟ್ರಗಳು ಶ್ರಮಿಸುತ್ತಿವೆ. ಈ ಎರಡೂ ರಾಷ್ಟ್ರಗಳ ನಡುವಿನ ವಾರ್ಷಿಕ ಕಾರ್ಯತಂತ್ರ ಸಭೆ ಜನವರಿ 7ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿನ ನಿಯೋಗ ಫ್ರಾನ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಇಮ್ಯಾನುಯೆಲ್ ಬೊನ್ನೆ ನಿಯೋಗದೊಂದಿಗೆ ಮಾತುಕತೆ ನಡೆಸಲಿದೆ.
ಇದನ್ನೂ ಓದಿ:ಗಣರಾಜ್ಯೋತ್ಸವದಂದು ಅತಿಥಿಯಾಗಿ ಭಾರತಕ್ಕೆ ಆಗಮಿಸುತ್ತಿಲ್ಲ ಬ್ರಿಟನ್ ಪ್ರಧಾನಿ!
ಜಾಗತಿಕ ವಿಷಯಗಳು ಹಾಗೂ ಎರಡೂ ರಾಷ್ಟ್ರಗಳ ಆಂತರಿಕ ವಿಚಾರಗಳ ಬಗ್ಗೆ ಭಾರತ ಮತ್ತು ಫ್ರಾನ್ಸ್ ನಿಯೋಗಗಳು ಮಾತುಕತೆ ನಡೆಸಲಿವೆ. ಮಾತುಕತೆಯ ನಂತರ ಇತರ ಭಾರತೀಯ ಅಧಿಕಾರಿಗಳೊಂದಿಗೆ ಇಮ್ಯಾನುಯೆಲ್ ಬೊನ್ನೆ ಮಾತುಕತೆ ನಡೆಸಲಿದ್ದಾರೆ.
ಇದಕ್ಕೂ ಮೊದಲು 2020ರ ಫೆಬ್ರವರಿಯಲ್ಲಿ ಪ್ಯಾರಿಸ್ನಲ್ಲಿ ಉಭಯ ರಾಷ್ಟ್ರಗಳ ಸಭೆ ನಡೆದಿತ್ತು.