ಕರ್ನಾಟಕ

karnataka

ETV Bharat / bharat

ದ್ವಿಪಕ್ಷೀಯ ಸಹಕಾರ ಮುಂದುವರಿಸಲು ಫ್ರಾನ್ಸ್​ - ಭಾರತ ಮಹತ್ವದ ಮಾತುಕತೆ - ದ್ವಿಪಕ್ಷೀಯ ಸಹಕಾರದ ಮಾತುಕತೆ

India, France talks: ವಿದೇಶಾಂಗ ಕಾರ್ಯದರ್ಶಿ ಹರ್ಷ್‌ ಶೃಂಗ್ಲಾ ದೆಹಲಿಯಲ್ಲಿ ಆಯೋಜಿಸಿದ್ದ ವಿದೇಶಾಂಗ ಕಚೇರಿ ಸಮಾಲೋಚನೆ - ಎಫ್‌ಒಸಿ ಸಭೆಯಲ್ಲಿ ಫ್ರಾನ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಫ್ರಾಂಕೋಯಿಸ್ ಡೆಲಾಟ್ರೆ ನಿಯೋಗ ಭಾಗವಹಿಸಿತ್ತು.

India-France holds foreign office consultations to take stock of strategic ties
ದೆಹಲಿಯಲ್ಲಿ ಭಾರತ-ಫ್ರಾನ್ಸ್‌ ಎಫ್‌ಒಸಿ ಸಭೆ; ದ್ವಿಪಕ್ಷೀಯ ಸಹಕಾರದ ಮಾತುಕತೆ

By

Published : Dec 21, 2021, 7:41 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು ನಡೆದ ವಿದೇಶಾಂಗ ಕಚೇರಿ ಸಮಾಲೋಚನೆ(ಎಫ್‌ಒಸಿ) ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷ್‌ ಶೃಂಗ್ಲಾ ಅವರು ಫ್ರಾನ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಫ್ರಾಂಕೋಯಿಸ್ ಡೆಲಾಟ್ರೆ ಅವರ ನಿಯೋಗದೊಂದಿಗೆ ಮಾತುಕತೆ ನಡೆಸಿದರು.

Foreign Office Consultations: ಬಳಿಕ ಮಾತನಾಡಿದ ಶೃಂಗ್ಲಾ, ಬಾಹ್ಯಾಕಾಶ ಹಾಗೂ ಇಂಧನ ಸೇರಿದಂತೆ ಹಲವು ಕ್ಷೇತ್ರಗಳ ಕುರಿತ ದ್ವಿಪಕ್ಷೀಯ ಸಹಕಾರದ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ. ಉಭಯ ದೇಶಗಳ ನಡುವಿನ ಇತರ ಸಂವಾದ ಕಾರ್ಯವಿಧಾನಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲಿಸಿದ್ದೇವೆ ಎಂದು ಹೇಳಿದರು.

ನಾವು ಬಹುಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ನಮ್ಮ ನಿಕಟ ಸಹಕಾರದ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದ್ದೇವೆ. ಅದು ಯುಎನ್‌ಎಸ್‌ಸಿ ಅಥವಾ ತ್ರಿಪಕ್ಷೀಯ ಸಹಕಾರವಾಗಿರಬಹುದು. ಭಾರತ ಮತ್ತು ಫ್ರಾನ್ಸ್ ಅತ್ಯಂತ ನಿಕಟ ಸಮನ್ವಯದಲ್ಲಿ ಕೆಲಸ ಮಾಡಿದ ಯುಎನ್‌ಎಸ್‌ಸಿಯ ಖಾಯಂ ಸದಸ್ಯರಾಗಿ ಭಾರತದ ಅವಧಿಗೆ ಸಿದ್ಧರಾಗಲು ನಮಗೆ ಸಹಾಯ ಮಾಡಿತು ಎಂದು ಶೃಂಗ್ಲಾ ಪುನರುಚ್ಚರಿಸಿದರು.

ಇದೇ 17 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮೂರನೇ ವಾರ್ಷಿಕ ರಕ್ಷಣಾ ಸಂವಾದಕ್ಕಾಗಿ ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿ ಭೇಟಿ ಫಲಪ್ರದ ಬೆನ್ನಲ್ಲೇ ಎಫ್‌ಒಸಿ ಯಶಸ್ವಿಯಾಗಿದೆ.

ಇದಕ್ಕೂ ಮೊದಲು ಅಂದರೆ 2020ರ ಅಕ್ಟೋಬರ್ 30 ರಂದು ಭಾರತ - ಫ್ರಾನ್ಸ್‌ ಪ್ಯಾರಿಸ್‌ನಲ್ಲಿ ಸಮಾಲೋಚನೆ ನಡೆಸಿದ್ದವು, ಅಲ್ಲಿ ಎರಡೂ ರಾಷ್ಟ್ರಗಳು ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಕೋವಿಡ್ -19 ಸಾಂಕ್ರಾಮಿಕ ಮತ್ತು ಭೌಗೋಳಿಕ ರಾಜಕೀಯ ಬದಲಾವಣೆಗಳ ಕುರಿತ ವಿಷಯಗಳನ್ನು ವಿನಿಮಯ ಮಾಡಿಕೊಂಡಿದ್ದವು.

ಇದನ್ನೂ ಓದಿ:ಭಾರತ 90 ದೇಶಗಳಿಗೆ ಕೋವಿಡ್‌ ಲಸಿಕೆ ನೀಡಿದೆ - ಸಚಿವ ಎಸ್‌.ಜೈಶಂಕರ್‌

ABOUT THE AUTHOR

...view details