ಉದಯಪುರ(ರಾಜಸ್ಥಾನ): ಅಭಿವೃದ್ಧಿಶೀಲ ರಾಷ್ಟ್ರಗಳು, ಜಾಗತಿಕ ದಕ್ಷಿಣ ಮತ್ತು ಮುಂದುವರಿದ ಆರ್ಥಿಕತೆಗಳ ನಡುವೆ ಗೆಲುವು-ಗೆಲುವಿನ ಸಹಯೋಗವನ್ನು ರೂಪಿಸುವತ್ತ ಭಾರತದ ಜಿ 20 ಅಧ್ಯಕ್ಷತೆಯ ಗಮನ ಕೇಂದ್ರೀಕೃತವಾಗಿರುತ್ತದೆ ಎಂದು ಜಿ 20 ಶೃಂಗಸಭೆಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದರು.
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಜಿ20 ಶೆರ್ಪಾದಲ್ಲಿ ಮಾತನಾಡಿದ ಅವರು, ನಾವು ಹೊಸ ವಿಧಾನಗಳನ್ನು ನಿರ್ಮಿಸಬೇಕಾಗಿದೆ. ಇದು ಅಭಿವೃದ್ಧಿ ಹೊಂದಿದ ಜಗತ್ತು ಮತ್ತು ಉದಯೋನ್ಮುಖ ಆರ್ಥಿಕತೆಗಳೆರಡಕ್ಕೂ ಒಂದು ವಿಶಿಷ್ಟ ವೇದಿಕೆಯಾಗಿದೆ. ಆದ್ದರಿಂದ ನಾವು ಪ್ರಮುಖ ವಿಷಯಗಳಲ್ಲಿ ಜಗತ್ತಿಗೆ ಪ್ರಯೋಜನವಾಗುವ ವಿಧಾನಗಳನ್ನು ನಿರ್ಮಿಸಬೇಕಾಗಿದೆ ಎಂದರು.