ಕರ್ನಾಟಕ

karnataka

ETV Bharat / bharat

ಬ್ರಹ್ಮಪುತ್ರ ನದಿಯೊಳಗೆ ನಿರ್ಮಾಣವಾಗಲಿದೆ ದೇಶದ ಮೊದಲ ಸುರಂಗ ಮಾರ್ಗ - ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಕರ್ನಲ್ ಜನರಲ್

ಈಟಿವಿ ಭಾರತ್‌ ವಿಶೇಷ ಸಂದರ್ಶನದಲ್ಲಿ ಗಡಿ ರಸ್ತೆಗಳ ಸಂಘಟನೆಯ ಡೈರೆಕ್ಟರ್ ಜನರಲ್ ರಾಜೀವ್ ಚೌಧರಿ ಅವರು ಅಂತಾರಾಷ್ಟ್ರೀಯ ಗಡಿ ಮೂಲಸೌಕರ್ಯಾಭಿವೃದ್ಧಿ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಂಡರು.

ETV Bharat Journalist Pranab Kumar Das Exclusive Interview with Lt Gen Rajeev Chaudhary
ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಜತೆಗೆ ETV ಭಾರತ್ ಪತ್ರಕರ್ತ ಪ್ರಣಬ್ ಕುಮಾರ್ ದಾಸ್ ವಿಶೇಷ ಸಂದರ್ಶನ

By

Published : Apr 21, 2023, 6:23 PM IST

ತೇಜ್‌ಪುರ (ಅಸ್ಸಾಂ):ಅರುಣಾಚಲ ಪ್ರದೇಶ ವಿಚಾರಕ್ಕಾಗಿ ಚೀನಾ ಪದೇ ಪದೇ ಭಾರತದೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಲೇ ಇರುತ್ತದೆ. ಕೇಂದ್ರ ಸರ್ಕಾರವು ಅತ್ಯಾಧುನಿಕ ಸೌಲಭ್ಯ ಕಲ್ಪಿಸುವುದರೊಂದಿಗೆ ಗಡಿ ಸಂಪರ್ಕವನ್ನೂ ಸುಗಮಗೊಳಿಸಿದೆ. ಪ್ರಸ್ತುತ ಭಾರತ ಸರ್ಕಾರವು LAC ಗಡಿ ಸಂಪರ್ಕಿಸುವ ರಸ್ತೆಗಳ ನಿರ್ಮಾಣ ಮತ್ತು ಹೆಚ್ಚುವರಿ 1,800 ಕಿ.ಮೀ ರಸ್ತೆಗಳ ಅಭಿವೃದ್ಧಿಯನ್ನು ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ) ಮೂಲಕ ಕೈಗೆತ್ತಿಕೊಂಡಿದೆ.

ತೇಜ್‌ಪುರದ ಪ್ರಾಜೆಕ್ಟ್ ವರ್ತಕ್‌ನಲ್ಲಿಂದು ಈಟಿವಿ ಭಾರತ್‌ ಹಿರಿಯ ಪತ್ರಕರ್ತ ಪ್ರಣಬ್ ಕುಮಾರ್ ದಾಸ್ ಅವರು ನಡೆಸಿದ ವಿಶೇಷ ಸಂದರ್ಶನದಲ್ಲಿ, ಗಡಿ ರಸ್ತೆಗಳ ಸಂಘಟನೆ ಡೈರೆಕ್ಟರ್ ಜನರಲ್, ಲೆಫ್ಟಿನೆಂಟ್ ಕರ್ನಲ್ ಜನರಲ್ ರಾಜೀವ್ ಚೌಧರಿ ಸಾಕಷ್ಟು ಮಾಹಿತಿ ಹಂಚಿಕೊಂಡರು. ಗಡಿಯುದ್ದಕ್ಕೂ ಸಂಪರ್ಕ ಸಾಧಿಸುವ 1,800 ಕಿ.ಮೀ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಎರಡು ಪ್ರಮುಖ ಸುರಂಗಗಳ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಎಂದರು. ಗೃಹ ಸಚಿವ ಅಮಿತ್ ಶಾ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ ಕಿಬಿತು ಎಂಬಲ್ಲಿ ಮೊದಲ ಗಡಿ ಗ್ರಾಮ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ದೇಶದ ಒಟ್ಟು 1,662 ಗ್ರಾಮಗಳ ಪೈಕಿ ಅರುಣಾಚಲ ಪ್ರದೇಶದ 441 ಗ್ರಾಮಗಳನ್ನು ಮೊದಲ ಹಂತದಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದರು.

ಭಾರತದ ಆ್ಯಕ್ಟ್ ಈಸ್ಟ್ ನೀತಿ ಎಲ್ಲ ಗಡಿ ಮೂಲಸೌಕರ್ಯಗಳನ್ನು ಒಳಗೊಂಡಿದೆ. ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಕೇಂದ್ರ ಒಟ್ಟು 4,800 ಕೋಟಿ ರೂ ವೆಚ್ಚು ಮಾಡುತ್ತಿದೆ. ಇದರಲ್ಲಿ ಶೇ.50ರಷ್ಟು ಅಂದರೆ 2,500 ಕೋಟಿ ರೂ.ಗಳನ್ನು ಒಂದೇ ಗಡಿ ರಸ್ತೆ ನಿರ್ಮಾಣಕ್ಕೆ ವಿನಿಯೋಗಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ದಕ್ಷಿಣ ಸೋವನ್‌ಸಿರಿ ಜಿಲ್ಲೆಯ ಮಜಾ ಗ್ರಾಮವು ಅರುಣಾಚಲ ಪ್ರದೇಶದ ಗಡಿಯ ಮೊದಲ ಗ್ರಾಮ. ಲೈನ್ ಆಫ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ಗಡಿಗೆ ಇದು ಸಂಪರ್ಕ ಪೂರ್ಣಗೊಳಿಸಿದೆ. ಇದು ಅರುಣಾಚಲದ ಗಡಿ ರಸ್ತೆಗಳ ಯೋಜನೆಯ ಅಡಿಯಲ್ಲಿ ಬರುತ್ತಿದೆ.

ಈ ಗಡಿ ಗ್ರಾಮ ಬಹಳ ಮಹತ್ವ ಪಡೆದಿದ್ದು, ಅಕ್ಟೋಬರ್ 18, 1962 ರಂದು 2 ಜೆಕೆ ರೈಫಲ್ಸ್‌ನ ಹವಾಲ್ದಾರ್ ಶೇರ್ ಥಾಪಾ ಅವರು 155 ಚೀನಿ ಸೈನಿಕರನ್ನು ಕೊಂದ ಪ್ರದೇಶ ತಮಾ ಚುಂಗ್ ಚುಂಗ್-ಮಜಾ ಆಗಿದೆ. ಇದನ್ನು ಅವರ ಕಮಾಂಡಿಂಗ್ ಆಫೀಸರ್ ಕರ್ನಲ್ ಅಮರ್ ಪಾಟೀಲ್ ದೃಢೀಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಗೆಲೆಮೊ ದಕ್ಪಾ 5,870 ಅಡಿ ಎತ್ತರದಲ್ಲಿದೆ. ಗೆಲೆನ್ಸಿನ್ಯಾಕ್‌ನಿಂದ 17 ಕಿಮೀ ಮೌಂಟ್ ಶೆರಿ ಸುತ್ತಲೂ ಟಿಬೆಟಿಯನ್ ಸಾರಿ ತೀರ್ಥಯಾತ್ರೆ ಮಾರ್ಗದಲ್ಲಿದೆ. ತೀರ್ಥಯಾತ್ರೆ ಸಾರಿ ಚು ಕಣಿವೆಯಿಂದ ಗೆಲೆಂಚಿನ್ಯಾಕ್‌ಗೆ ಮುಂದುವರಿಯುತ್ತದೆ. ಸುಬಾನ್ಸಿರಿ ಕಣಿವೆಯ ಮೂಲಕ ಟಿಬೆಟ್‌ಗೆ ಹಿಂತಿರುಗುತ್ತದೆ. 1962 ರ ಭಾರತ-ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ, ನಂತರ ಯಾವುದೇ ತೀರ್ಥಯಾತ್ರೆ ಮಾಡಲಾಗಿಲ್ಲ ಎಂದು ತಿಳಿಸಿದರು.

ಎಲ್ಲ ರೀತಿಯ ವಾಹನಗಳು ಈಗ ಮಜಾ ಗ್ರಾಮದಿಂದ ಗಡಿಗೆ ಬರಬಹುದು. ಈ ರಸ್ತೆ ಶೀಘ್ರದಲ್ಲಿ ಡಾಂಬರೀಕರಣಗೊಳ್ಳಲಿದೆ. ಭದ್ರತಾ ಪಡೆಗಳಿಗೆ ಇದು ಅತ್ಯಂತ ಪ್ರಮುಖ ಗಡಿ ರಸ್ತೆಯಾಗಿದೆ. ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸುವ 9.8 ಕಿ.ಮೀ ಉದ್ದದ ಸುರಂಗವು ವಿಶ್ವದ ಅತಿ ಉದ್ದದ ರಸ್ತೆ, ರೈಲು ಸುರಂಗವಾಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಯೋಜನೆಗೆ ಅನುಮೋದನೆ ನೀಡಿದ್ದು, ಅಂತಿಮ ಹಂತದಲ್ಲಿದೆ ಎಂದು ಲೆ.ಕರ್ನಲ್ ಜನರಲ್ ಚೌಧರಿ ತಿಳಿಸಿದರು.

ಸುರಕ್ಷತೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುರಂಗವನ್ನು ನಿರ್ಮಿಸಲಾಗುವುದು. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನೀರಿನ ಮೂಲಕ ಮೆಟ್ರೋ ರೈಲು ನಿರ್ಮಿಸಿದ್ದು ಭಾರತದಲ್ಲಿ ನದಿಗಳಲ್ಲಿ ನಿರ್ಮಿಸಿದ ಮೊದಲ ರಸ್ತೆ ಸುರಂಗ ಇದಾಗಿದೆ. ಸದ್ಯ ಯೋಜನೆ ಅಂತಿಮ ಹಂತದಲ್ಲಿದ್ದು, ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.

ಇದನ್ನೂಓದಿ:ವೈಎಸ್ ವಿವೇಕಾನಂದ ರೆಡ್ಡಿ ಕೊಲೆ ಕೇಸ್: ಕಡಪ ಸಂಸದ ಅವಿನಾಶ್, ತಂದೆ ಭಾಸ್ಕರ್​ ರೆಡ್ಡಿ ಸೇರಿ ಮೂವರಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆ

ABOUT THE AUTHOR

...view details