ಪುಣೆ, ಮಹಾರಾಷ್ಟ್ರ:ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ನಡೆಯುತ್ತಿದೆ.ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕರ್ನಾಟಕದ ಕುವರ ಕೆ.ಎಲ್.ರಾಹುಲ್ ಅರ್ಧಶತಕ ದಾಖಲಿಸಿ, ತಂಡಕ್ಕೆ ಆಸರೆಯಾಗಿದ್ದಾರೆ. ಕೊಹ್ಲಿ 79 ಎಸೆತಗಳಲ್ಲಿ 66 ರನ್ ದಾಖಲಿಸಿ, ಆದಿಲ್ ರಶೀದ್ ಬೌಲಿಂಗ್ನಲ್ಲಿ ಜಾಸ್ ಬಟ್ಲರ್ಗೆ ಕ್ಯಾಚ್ ಒಪ್ಪಿಸಿದ್ದಾರೆ.
ರಾಹುಲ್ 66 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಸಾಕಷ್ಟು ಟೀಕೆಗಳ ನಂತರ ಕಂಬ್ಯಾಕ್ ಮಾಡಿದ್ದಾರೆ. ರೋಹಿತ್ ಶರ್ಮಾ 25 ಎಸೆತಗಳಲ್ಲಿ 25 ರನ್ಗಳಿಸಿ ಸ್ಯಾಮ್ ಕುರ್ರಾನ್ ಎಸೆತದಲ್ಲಿ ಔಟ್ ಆಗಿದ್ದು, ಶಿಖರ್ ಧವನ್ 17 ಎಸೆತಗಳಲ್ಲಿ ರೀಸ್ ಟೋಪ್ಲೆ ಬೌಲಿಂಗ್ನಲ್ಲಿ ಬೆನ್ಸ್ಟೋಕ್ಗೆ ಕ್ಯಾಚ್ ಒಪ್ಪಿಸುವ ಮೂಲಕ ಪೆವಿಲಿಯನ್ಗೆ ಮರಳಿದ್ದಾರೆ.