ಕರ್ನಾಟಕ

karnataka

ETV Bharat / bharat

ಭಾರತವು ವಿಶ್ವದ ಎರಡನೇ ಅತಿದೊಡ್ಡ ಸ್ಟಾರ್ಟಪ್ ಕೇಂದ್ರವಾಗಿ ಹೊರಹೊಮ್ಮಿದೆ: ಪ್ರಧಾನಿ ಮೋದಿ - ಭಾರತವು ವಿಶ್ವದ ಎರಡನೇ ಅತಿದೊಡ್ಡ ಸ್ಟಾರ್ಟ್ಅಪ್ ಕೇಂದ್ರವಾಗಿ ಹೊರಹೊಮ್ಮಿದೆ ಎಂದ ಮೋದಿ

PM Modi speaks on India startup: ಭಾರತಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳು ತುಂಬುವ ವೇಳೆಗೇ ನಾವು ಸಾಕಷ್ಟು ಸಾಧನೆಗಳನ್ನು ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ನಮ್ಮಿಂದ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗ ಎರಡು ನಿಮಿಷ ವ್ಯರ್ಥ ಮಾಡಲು ನಮಗೆ ಅವಕಾಶವಿಲ್ಲ. ಕಳೆದ 7 ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೇಂದ್ರದಿಂದ ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಮೋದಿ ಹೇಳಿದರು.

PM Modi
ಪ್ರಧಾನಿ ಮೋದಿ

By

Published : Dec 28, 2021, 3:43 PM IST

Updated : Dec 28, 2021, 7:29 PM IST

ಕಾನ್ಪುರ (ಉತ್ತರ ಪ್ರದೇಶ): ಭಾರತವು ವಿಶ್ವದ ಎರಡನೇ ಅತಿದೊಡ್ಡ ಸ್ಟಾರ್ಟ್ಅಪ್ ಕೇಂದ್ರವಾಗಿ ಹೊರಹೊಮ್ಮಿದೆ ಮತ್ತು ಇದನ್ನು ಹೆಚ್ಚಾಗಿ ಭಾರತೀಯ ವಿದ್ಯಾರ್ಥಿಗಳ ಸಹಾಯದಿಂದ ಸಾಧಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಕಾನ್ಪುರ)ಯ 54ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಈ 75ನೇ ವರ್ಷದಲ್ಲಿ, ನಾವು 75 ಯುನಿಕಾರ್ನ್‌ಗಳನ್ನು ಹೊಂದಿದ್ದೇವೆ. 50,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದೇವೆ. ಇವುಗಳಲ್ಲಿ 10,000 ಸ್ಟಾರ್ಟ್‌ಅಪ್‌ಗಳು ಕಳೆದ 6 ತಿಂಗಳಲ್ಲಿ ಬಂದಿವೆ. ಭಾರತವು ಇಂದು ವಿಶ್ವದ ಎರಡನೇ ಅತಿ ದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಹೊರಹೊಮ್ಮಿದೆ. ಈ ಸಾಧನೆಯನ್ನು ಮುಖ್ಯವಾಗಿ ಐಐಟಿಗಳ ವಿದ್ಯಾರ್ಥಿಗಳ ಸಹಾಯದಿಂದ ಸಾಧಿಸಲಾಗಿದೆ ಎಂದರು.

5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಐಐಟಿ ಕಾನ್ಪುರದ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ. ಭಾರತವು ತನ್ನ 100ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುವಾಗ, ಇಂದು ಇಲ್ಲಿ ಹಾಜರಿರುವ ಎಲ್ಲಾ ವಿದ್ಯಾರ್ಥಿಗಳ ಕೊಡುಗೆಯನ್ನು ಒಳಗೊಂಡಿರುತ್ತದೆ ಎಂದು ಪ್ರಧಾನಿ ಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದರು.

ಇದನ್ನೂ ಓದಿ: ಗಾಂಧೀಜಿ ನಿಂದಿಸಿ ಗೋಡ್ಸೆ ಹೊಗಳಿದ್ದ ಹಿಂದೂ ಗುರು ಕಾಳಿಚರಣ್‌ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲು

'ಪ್ರತಿಯೊಬ್ಬರೂ ಧಾರ್ಮಿಕವಾಗಿ ಶ್ರಮಿಸಬೇಕು'

ಭಾರತಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳು ತುಂಬುವ ಸಂದರ್ಭದಲ್ಲೇ ನಾವು ಸಾಕಷ್ಟು ಸಾಧನೆಗಳನ್ನು ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ನಮ್ಮಿಂದ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗ ಎರಡು ನಿಮಿಷ ವ್ಯರ್ಥ ಮಾಡಲು ನಮಗೆ ಅವಕಾಶವಿಲ್ಲ. ಕಳೆದ 7 ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೇಂದ್ರದಿಂದ ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಸಹಾಯದಿಂದ ಯುವಜನತೆ ದೊಡ್ಡ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧರಾಗಿದ್ದಾರೆ. ಆತ್ಮನಿರ್ಭರ ಭಾರತವನ್ನು ಸಾಧಿಸಲು ಪ್ರತಿಯೊಬ್ಬರೂ ಧಾರ್ಮಿಕವಾಗಿ ಶ್ರಮಿಸಬೇಕು ಎಂದು ಹೇಳಿದರು.

ನಾವು ಸ್ವಾವಲಂಬಿಗಳಲ್ಲದಿದ್ದರೆ ಭಾರತವು ಹೇಗೆ ಯಶಸ್ವಿಯಾಗುತ್ತದೆ? ಹೇಗೆ ಎತ್ತರಕ್ಕೆ ಬೆಳೆಯುತ್ತದೆ?. ಇದು ಈ ದೇಶದ ಯುವಕರಿಂದ ಮಾತ್ರ ಸಾಧ್ಯ. ಈ ಶತಮಾನವು ಸಂಪೂರ್ಣವಾಗಿ ತಂತ್ರಜ್ಞಾನ ಚಾಲಿತವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ವರ್ಷಗಳನ್ನು ತಂತ್ರಜ್ಞಾನದ ಬಗ್ಗೆ ಕಲಿಯಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ನಿಮ್ಮನ್ನು ತಡೆಯಲು ಬೇರೆ ಯಾವುದೇ ಶಕ್ತಿಗೆ ಅಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.

Last Updated : Dec 28, 2021, 7:29 PM IST

For All Latest Updates

TAGGED:

ABOUT THE AUTHOR

...view details