ನವದೆಹಲಿ:ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತ ಪ್ರವಾಸ ಕೈಗೊಂಡಿದ್ದು, ಬುಧವಾರ ಅಹಮದಾಬಾದ್‌ಗೆ ಆಗಮಿಸಿದರು. ಮಾರ್ಚ್ 8ರಿಂದ 11ರವರೆಗೆ ಭಾರತಕ್ಕೆ ಅಧಿಕೃತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ವಾಗತಿಸಿದರು. ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಜೀಗೆ ಆಸೀಸ್ ಪ್ರಧಾನಿ ಗೌರವ ನಮನ ಸಲ್ಲಿಸಿದರು.
ಹೋಳಿ ಆಚರಿಸಿದ ಆಸ್ಟ್ರೇಲಿಯಾ ಪ್ರಧಾನಿ:ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರು, ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದ ನಂತರ, ಹೋಳಿ ಹಬ್ಬ ಆಚರಿಸಿದರು. "ಭಾರತದ ಅಹಮದಾಬಾದ್‌ಗೆ ಅದ್ಧೂರಿ ಸ್ವಾಗತ ಮಾಡಲಾಗಿದೆ. ಆಸ್ಟ್ರೇಲಿಯಾ - ಭಾರತ ಸಂಬಂಧಗಳಿಗೆ ಒಂದು ಪ್ರಮುಖವಾದ ಪ್ರವಾಸವಾಗಲಿದೆ'' ಭಾರತಕ್ಕೆ ಆಗಮಿಸಿದ ಆಸ್ಟ್ರೇಲಿಯಾದ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಅಲ್ಬನೀಸ್ ಭಾರತಕ್ಕೆ ಆಗಮಿಸುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಗಮನಕ್ಕಾಗಿ ಭಾರತವು ಕುತೂಹಲದಿಂದ ಕಾಯುತ್ತಿದೆ ಎಂದು ಬುಧವಾರ ಹೇಳಿದರು. ಭಾರತ - ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಉತ್ಪಾದಕ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಬುಧವಾರ ಟ್ವೀಟ್ ಮಾಡುವ ಮೂಲಕ ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಆಹ್ವಾನಿಸಿದರು.
ಆಸ್ಟ್ರೇಲಿಯಾದ ಪ್ರಧಾನಿ ಟ್ವೀಟ್: ಆಸ್ಟ್ರೇಲಿಯಾದ ಪ್ರಧಾನಿ ತಮ್ಮ ಭಾರತೀಯ ಸಹವರ್ತಿಯವರ ಆಹ್ವಾನದ ಮೇರೆಗೆ ಬುಧವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಅಲ್ಬನೀಸ್ ಈ ಪ್ರವಾಸವು ಉಭಯ ದೇಶಗಳ ನಡುವಿನ ಸಂಬಂಧವನ್ನು ಗಾಢಗೊಳಿಸುವ ಬದ್ಧತೆ ತೋರಿಸುತ್ತದೆ ಎಂದು ಅಲ್ಬನೀಸ್ ಬುಧವಾರ ಟ್ವೀಟ್ ಮಾಡಿದ್ದಾರೆ. ನಮ್ಮ ಪ್ರದೇಶದಲ್ಲಿನ ಸ್ಥಿರತೆ ಮತ್ತು ಬೆಳವಣಿಗೆಗಳು ಶಕ್ತಿಯಾಗಬೇಕು ಎಂದು ಅಲ್ಬನೀಸ್ ಹೇಳಿದರು.
ಇಂದು ನಾನು, ಮಂತ್ರಿಗಳು ಮತ್ತು ವ್ಯಾಪಾರ ಮುಖಂಡರ ನಿಯೋಗವನ್ನು ಭಾರತಕ್ಕೆ ಕರೆತರುತ್ತಿದ್ದೇನೆ. ಆಸ್ಟ್ರೇಲಿಯಾ ಮತ್ತು ಭಾರತ ಆಳವಾದ ಸ್ನೇಹವನ್ನು ಹೊಂದಿದೆ. ನಮ್ಮ ಹಿತಾಸಕ್ತಿಗಳು ಅದಕ್ಕೆ ಆಧಾರವಾಗಿದೆ. ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು, ನಮ್ಮ ನಡುವಿನ ಬಾಂಧವ್ಯ - ಪ್ರೀತಿಯ ಹಾಗೂ ಕ್ರೀಡಾ ಪೈಪೋಟಿ ಕುರಿತು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.