ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ದಿನನಿತ್ಯ ನಾಲ್ಕು ಲಕ್ಷದವರೆಗೂ ಕೋವಿಡ್ ಪ್ರಕರಣಗಳು ವರದಿಯಾಗುತ್ತಿತ್ತು. ನಿನ್ನೆ 86,498 ಕೇಸ್ಗಳು ಪತ್ತೆಯಾಗಿ ಕೊಂಚ ನಿರಾಳ ಎನ್ನುವಷ್ಟರಲ್ಲಿ ಮತ್ತೆ ಇಂದು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.
ಈವರೆಗಿನ ಅಂಕಿಅಂಶ:
ಕಳೆದೊಂದು ದಿನದ ಅವಧಿಯಲ್ಲಿ ದೇಶದಲ್ಲಿ 92,596 ಕೇಸ್ಗಳು ಪತ್ತೆಯಾಗಿವೆ. ಸಾವಿನ ಪ್ರಮಾಣವೂ ಏರಿಕೆಯಾಗಿದ್ದು, 2,219 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 2,90,89,069 ಹಾಗೂ ಮೃತರ ಸಂಖ್ಯೆ 3,53,528 ಕ್ಕೆ ಏರಿಕೆಯಾಗಿದೆ.
ಇಂದು 1,62,664 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಭಾರತದಲ್ಲಿ 12,31,415 ಕೊರೊನಾ ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.